Kailasanatha Mahesha

Composer : Shri Vishwendra Tirtharu

By Smt.Shubhalakshmi Rao

ಕೈಲಾಸನಾಥ ಮಹೇಶ ಈಶ
ಶೈಲೇಶ ತನಯೇಶ ಬಾಲಾರ್ಕ ಸಮಭಾಸ [ಪ]

ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತ
ತಾಲಾಂಕನನುಜನೊಳ್ ಸಮರಗೈದೀರ್ಪ
ಫಾಲಾಕ್ಷದಿಂದಲಿ ಕಾಮನ ದಹಿಸಿರ್ಪ
ಶೂಲಿಯ ಮಹಿಮೆಯನೇನು ಬಣ್ಣಿಸಲಿ [೧]

ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವ
ವಿಷ್ಣುಭಕ್ತರೊಳಗತಿ ಪ್ರೇಮವಿರುವ
ಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪ
ಸನಕಾದಿಗಳ ಶಿಷ್ಯ ದುರ್ವಾಸರೆನಿಪ [೨]

ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವ
ಕಂಜಜಾತನ ಸುತನೆನಿಸಿರ್ದ ದೇವ
ರಾಜೇಶ ಹಯಮುಖ ಭಕ್ತಪುಂಗವ ನೀನು
ಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ [೩]


kailAsanAtha mahESa ISa
SailESa tanayESa bAlArka samaBAsa [pa]

SUlAkSha DamarugaLiMda SOBipa hasta
tAlAMkananujanoL samaragaidIrpa
PAlAkShadiMdali kAmana dahisirpa
SUliya mahimeyanEnu baNNisali [1]

vaiShNavAgraNiyeMdu pesarugoMDiruva
viShNuBaktaroLagati prEmaviruva
kRuShNa dvaipAyanara sutarAgi SOBipa
sanakAdigaLa SiShya durvAsarenipa [2]

naMjuMDanenisirpa praKyAta mahAdEva
kaMjajAtana sutanenisirda dEva
rAjESa hayamuKa BaktapuMgava nInu
aMjali baMdhadiM namipe ninnaDige [3]

Leave a Reply

Your email address will not be published. Required fields are marked *

You might also like

error: Content is protected !!