Composer : Shri Harapanahalli Bheemavva
ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆ
ಬಂದೆನು ಬಾಗಿಲ ತೆಗೆಯೆ ಜಾಣೆ
ಬಂದೆನು ಬಾಗಿಲ ತೆಗೆಯೆ ||೧||
ಬಂದವರ್ಯಾರೀ ವ್ಯಾಳ್ಯದಿ ಬಾಗಿಲು
ಬಂದು ತೆಗೆಯೊರ್ಯಾರಿಲ್ಲ ಈಗ
ಬಂದು ತೆಗೆಯೊರ್ಯಾರಿಲ್ಲ ||೨||
ಅಂಗನಾಮಣಿ ಕೇಳೆ ಗಂಗಾಧರೆನಿಸಿದ
ಚಂದ್ರಶೇಖರ ನಾ ಬಂದೀನೆ ಜಾಣೆ
ಚಂದ್ರಶೇಖರ ನಾ ಬಂದೀನೆ ||೩||
ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆ
ಬಂದ ಕಾರಣವೇನು ನೀನು ಅವ
ರಿಂದ ಕಾರಣ ಮತ್ತೇನು ||೪||
ಕುಸುಮಲೋಚನೆ ಕೇಳೆ ಪಶುಪತಿ ನಾ ಬಂದೆ
ಕುಶಲದಿ ಬಾಗಿಲು ತೆಗೆಯೆ ಜಾಣೆ
ಕುಶಲದಿ ಬಾಗಿಲು ತೆಗೆಯೆ ||೫||
ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬು
ಹಸನಾಗಿ ತೋರಿಸೊ ಎನಗೆ ಕೊಂಬು
ಹಸನಾಗಿ ತೋರಿಸೊ ಎನಗೆ ||೬||
ಸರ್ವಶರೀರದಲ್ಲೆತ್ತಿ ಕೊಂಡಿರುವಂಥ
ಶ್ರೇಷ್ಠ ಶಿವನು ನಾ ಬಂದೀನೆ ಜಾಣೆ
ಶ್ರೇಷ್ಠ ಶಿವನು ನಾ ಬಂದೀನೆ ||೭||
ಸರ್ವ ಸೇರಿರುವಂಥ ಹುತ್ತ ನೀನಾದರೆ
ಇತ್ತ ಬರುವೋದುಚಿತಲ್ಲ ಪೋಗೊ
ಇತ್ತ ಬರುವೋದುಚಿತಲ್ಲ ||೮||
ಕಾಂತೆ ಪಾರ್ವತಿ ನೀಲಕಂಠ ನಾ ಬಂದೀನಿ
ಸಂತೋಷದಿ ಬಾಗಿಲು ತೆಗೆಯೆ
ಸಂತೋಷದಿ ಬಾಗಿಲು ತೆಗೆಯೆ ||೯||
ಕಂಠದೊಳಗೆ ಕಪ್ಪಿದ್ದರೆ ನೀ ನವಿ-
ಲಂತೆ ಕುಣಿದು ತೋರಿಸೆನಗೆ ನವಿ-
ಲಂತೆ ಕುಣಿದು ತೋರಿಸೆನಗೆ ||೧೦||
ಫಾಲಾಕ್ಷ ನಾ ರುಂಡಮಾಲೆ ಧರಿಸಿದಂಥ
ಶೂಲಿಯು ನಾನು ಬಂದೀನೆ ತ್ರಿ-
ಶೂಲಿಯು ನಾನು ಬಂದೀನೆ||೧೧||
ಮೂರು ಶೂಲೆಗಳ್ಯಾವ್ಯಾವ ಕಡೆಯಲುಂಟು
ಭಾಳ ಬಲ್ಲವರಲ್ಲೆ ಪೋಗಯ್ಯ ನೀ
ಭಾಳ ಬಲ್ಲವರಲ್ಲೆ ಪೋಗಯ್ಯ ||೧೨||
ಪ್ರಾಣದೊಲ್ಲಭೆ ಕೇಳೆ ಸ್ಥಾಣು ನಾ ಬಂದೀನಿ
ಜಾಣೆ ನೀ ಬಾಗಿಲು ತೆಗೆಯೆ ಒಳ್ಳೆ
ಜಾಣೆ ನೀ ಬಾಗಿಲು ತೆಗೆಯೆ ||೧೩||
ಸ್ಥಾಣು ನೀನಾದರೆ ವೇಣುಮದ್ದಲೆ ಮಾಡೊ
ಜಾಣರ ಮನೆಗೆ ನೀ ಪೋಗಯ್ಯ ಒಳ್ಳೆ
ಜಾಣರ ಮನೆಗೆ ನೀ ಪೋಗಯ್ಯ ||೧೪||
ಶಂಬರಾರಿಯ ಸಂಹರಿಸಿದ ಗಜ ಚ-
ರ್ಮಾಂಬರಧಾರನು ನಾನೇ ಚ-
ರ್ಮಾಂಬರಧಾರನು ನಾನೇ ||೧೫||
ಕಾಮನ ವೈರಿ ಭಸ್ಮಾಂಗವ ಧರಿಸಿದ
ಸಾಮಜ ವಸನವ ನೋಡಿ ಇರ-
ಲಾರೆನು ನಿನ್ನೊಡಗೂಡಿ ||೧೬||
ಭೂತಗಣಂಗಳ ನಾಥನಾಗಿರುವೊ ಪ್ರ-
ಖ್ಯಾತನು ನಾನು ಬಂದೀನೆ ಸದ್ಯೋ-
ಜಾತನು ನಾನು ಬಂದೀನೆ ||೧೭||
ಭೂತಗಣವ ಕೂಡಿ ಯಾತಕೆ ಬರುವುದು
ಭೀತಿ ಬಡುವೆ ಮುಂಚೆ ಸಾಗೋ ನಾ
ಭೀತಿ ಬಡುವೆ ಮುಂಚೆ ಸಾಗೋ||೧೮||
ಮಾತಿಗೆ ಮಾತನಾಡುವೋರೆ ಪಾರ್ವತಿ ಕೇಳೆ
ಮೂಕನಂತಿರುವೆನೆ ನಾನು ಇನ್ನು
ಮೂಕನಂತಿರುವೆನೆ ನಾನು ||೧೯||
ಮೂಕನಂತಿರುವುದ್ವಿವೇಕ ಭೀಮೇಶಕೃಷ್ಣ-
ನ್ನ ಕಾರುಣಕೆ ಪಾತ್ರಳೇನೋ ನಿನಗೆ
ನಾ ಕೈಯ ಮುಗಿವೆ ಬಾ ನೀನು ||೨೦||
iMduvadane pArvatiye nA illige
baMdenu bAgila tegeye jANe
baMdenu bAgila tegeye ||1||
baMdavaryArI vyALyadi bAgilu
baMdu tegeyoryArilla Iga
baMdu tegeyoryArilla ||2||
aMganAmaNi kELe gaMgAdharenisida
caMdraSEKara nA baMdIne jANe
caMdraSEKara nA baMdIne ||3||
siMdhurAjana satisutaranhottillige
baMda kAraNavEnu nInu ava
riMda kAraNa mattEnu ||4||
kusumalOcane kELe paSupati nA baMde
kuSaladi bAgilu tegeye jANe
kuSaladi bAgilu tegeye ||5||
paSugaLigella patiyAdare nina koMbu
hasanAgi tOriso enage koMbu
hasanAgi tOriso enage ||6||
sarvaSarIradalletti koMDiruvaMtha
SrEShTha Sivanu nA baMdIne jANe
SrEShTha Sivanu nA baMdIne ||7||
sarva sEriruvaMtha hutta nInAdare
itta baruvOducitalla pOgo
itta baruvOducitalla ||8||
kAMte pArvati nIlakaMTha nA baMdIni
saMtOShadi bAgilu tegeye
saMtOShadi bAgilu tegeye ||9||
kaMThadoLage kappiddare nI navi-
laMte kuNidu tOrisenage navi-
laMte kuNidu tOrisenage ||10||
PAlAkSha nA ruMDamAle dharisidaMtha
SUliyu nAnu baMdIne tri-
SUliyu nAnu baMdIne||11||
mUru SUlegaLyAvyAva kaDeyaluMTu
BALa ballavaralle pOgayya nI
BALa ballavaralle pOgayya ||12||
prANadollaBe kELe sthANu nA baMdIni
jANe nI bAgilu tegeye oLLe
jANe nI bAgilu tegeye ||13||
sthANu nInAdare vENumaddale mADo
jANara manege nI pOgayya oLLe
jANara manege nI pOgayya ||14||
SaMbarAriya saMharisida gaja ca-
rmAMbaradhAranu nAnE ca-
rmAMbaradhAranu nAnE ||15||
kAmana vairi BasmAMgava dharisida
sAmaja vasanava nODi ira-
lArenu ninnoDagUDi ||16||
BUtagaNaMgaLa nAthanAgiruvo pra-
KyAtanu nAnu baMdIne sadyO-
jAtanu nAnu baMdIne ||17||
BUtagaNava kUDi yAtake baruvudu
BIti baDuve muMce sAgO nA
BIti baDuve muMce sAgO||18||
mAtige mAtanADuvOre pArvati kELe
mUkanaMtiruvene nAnu innu
mUkanaMtiruvene nAnu ||19||
mUkanaMtiruvudvivEka BImESakRuShNa-
nna kAruNake pAtraLEnO ninage
nA kaiya mugive bA nInu ||20||
Leave a Reply