Composer : Shri Prasannavenkata dasaru
ಭಾಪು ಹರಿಮತನೆ [ಪ]
ಭಾಪು ಹರಿಮತ ಸ್ಥಾಪಿತನೆ ಮೂರು
ರೂಪಿನಲಿ ಬಂದು ಶ್ರೀಪತಿಯ ಮೆಚ್ಚು
ವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ [ಅ.ಪ.]
ಆದಿಯಲಿ ಅಂಜನಾದೇವಿಯ ಮಂಗ
ಳೋದರದಿ ಪುಟ್ಟಿ ಶ್ರೀ ದ್ಯುಮಣಿ ಕುಲ
ಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜ್ಞದಿ
ಆ ದಶಾಸ್ಯನ ಲಂಕಾ ದಹಿಸಿ ಜಾನ
ಕೀದೇವಿಯ ಸುದ್ದಿ ಶ್ರೀಧರಗರುಹಿ
ಯೋಧ ಬಾಧಿತರಾದ
ಕಪಿಚೇತನಾದಾಯಕ ತೇ ನಮೊ [೧]
ತುಂಗಗಿರಿ ಶತಶೃಂಗಕೃತ ಸುವ
ಜ್ರಾಂಗ ಅಗ್ನಿಜೆ ಸಂಗ ಮತ್ತ ನೃ
ಪಂಗಳಂ ಭುಜದಿಂ ಗೆಲಿದು ಯಜ್ಞ
ಸಂಗ್ರಹವ ಪೂರಿಸಿ
ಸಂಗಡಿಸಿದರಿ ಸಂಗರವ ಪೊಕ್ಕು
ಸಿಂಗ ಗರ್ಜನೆಯಿಂ ಗದೆಯಗೊಂಡು
ಭಂಗಿಸಿದೆಯೊ ಯುಗ್ಮಾಂಗ ಕೃಷ್ಣ
ಸೇವಾಂಗಕೃತ ತೇ ನಮೊ ನಮೊ [೨]
ತುಚ್ಛರಿಳೆಯೊಳು ಪೆರ್ಚಿ ಬಗೆ ಬಗೆ
ಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆ
ಅಚ್ಚುತೈಕ್ಯವನ್-ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿ
ಮಚ್ಚರಿಪರನು ಕೊಚ್ಚಿ ತಂತ್ರಸಾ
ರಾರ್ಚನೆ ಭೇದ ನಿಚ್ಚೈಸಿದಿ ಶಿರಿ
ಸಚ್ಚಿದಾತ್ಮ ಶ್ರೀವಚ್ಚ
ಪ್ರಸನ್ವೆಂಕಟಚ್ಛಮತ ತೇ ನಮೊ [೩]
BApu harimatane [pa]
BApu harimata sthApitane mUru
rUpinali baMdu SrIpatiya meccu
vA parAkrama vyApiside BAratIpate tE namo [a.pa.]
Adiyali aMjanAdEviya maMga
LOdaradi puTTi SrI dyumaNi kula
mEdinISana pAdakeragi aMbOdhidATyAj~jadi
A daSAsyana laMkA dahisi jAna
kIdEviya suddi SrIdharagaruhi
yOdha bAdhitarAda
kapicEtanAdAyaka tE namo [1]
tuMgagiri SataSRuMgakRuta suva
jrAMga agnije saMga matta nRu
paMgaLaM BujadiM gelidu yaj~ja
saMgrahava pUrisi
saMgaDisidari saMgarava pokku
siMga garjaneyiM gadeyagoMDu
BaMgisideyo yugmAMga kRuShNa
sEvAMgakRuta tE namo namo [2]
tucCariLeyoLu perci bage bage
kucCitArtha viraccisyAtmage
accutaikyavan-uccarisutire svacCa yatirUpadi
maccariparanu kocci taMtrasA
rArcane BEda niccaisidi Siri
saccidAtma SrIvaccha
prasanveMkaTacCamata tE namo [3]
Leave a Reply