Composer : Shri kakhandaki Krishna dasaru
ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ
ನೀಯನ್ನ ಮ್ಯಾಲ ||ಪ||
ಅನಿಮಿಷ ಮಾನಸ ಸಂಚಾರಾ
ಅನಾಥ ಜನ ಸಂಕಟ ಪರಿಹಾರಾ
ದೀನ ದಯಾಲ ರಮಾವರಾ
ನೆನೆವರ ಸಹಕಾರಾ [೧]
ಅನಸೂಯಾಕರ ಸಂಪುಟರನ್ನಾ
ಘನತರ ಚರಿತ ಪರಮ ಪಾವನ್ನಾ
ಅನುಪಮ ತ್ರೈಜಗ ಜೀವನ್ನಾ
ವನರುಹವದನಾ [೨]
ಸರಸಿಜೋದ್ಭವ ನುತ ಮನ್ನಾಥಾ
ವರ ನಿಗಮಾ ಗೋಚರ ಅನಂತಾ
ಕರುಣಾಂಬುಧಿಯೇ ಸರ್ವಾತೀತಾ
ಗುರು ಮಹಿಪತಿ ದಾತಾ [೩]
dattAtrEya svAmI kRupe mADai
nIyanna myAla ||pa||
animiSha mAnasa saMcArA
anAtha jana saMkaTa parihArA
dIna dayAla ramAvarA
nenevara sahakArA [1]
anasUyAkara saMpuTarannA
Ganatara carita parama pAvannA
anupama traijaga jIvannA
vanaruhavadanA [2]
sarasijOdBava nuta mannAthA
vara nigamA gOcara anaMtA
karuNAMbudhiyE sarvAtItA
guru mahipati dAtA [3]
Leave a Reply