Composer : Shri Vidyaprasanna Tirtharu on Shri Madhwacharya
ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ]
ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ]
ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ
ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ [೧]
ಭಾಸುರವರ ಕುಲದಿ ಜನಿಸಿ ವಾಸುದೇವ ನಾಮದಿಂದ
ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ [೨]
ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ
ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ [೩]
ಹರಿಯು ಜೀವರು ಸಮರು ಎಂದು ನರಿಯುತಕುತಿಗಳಿಂದ ಬೋಧಿಪ
ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ [೪]
ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ
ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ [೫]
ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ
ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ [೬]
ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ
ಭಾಷ್ಯಗಳನು ರಚಿಸಿ ತಮ್ಮ ಶಿಷ್ಯವರ್ಗಕೆ ಸಾರ ಪೇಳಿದ [೭]
ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ
ವರ ಕರುಣವ ಪಡೆಯುವುದೇ ನಿರುತ ಸುಖಕೆ ಪಥವೆಂದರುಹಿದ [೮]
ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ
ನಿರುತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂ ಪ್ರಸನ್ನರಾದ [೯]
yativarENyara manuja satata Bajiselo [pa]
satata vimala carita satyavatiya sutara manavarita [a.pa]
ajajanakana mahime maretu sujanarella baLalutalire
BujagaSayananAj~jeyiMda rajatapuradoLavatarisida [1]
BAsuravara kuladi janisi vAsudEva nAmadiMda
SaiSavavanu kaLedu turiya ASramavanu svIkarisida [2]
jIrNavAda nigamArthagaLa nirNayisida j~jAnAnaMda
pUrNavyAsaroL SravaNamADi pUrNapraj~jarAgi mereda [3]
hariyu jIvaru samaru eMdu nariyutakutigaLiMda bOdhipa
duruLavAdagaLanu muridu harisarvOttamaneMdaruhida [4]
Suktirajata j~jAnadaMte viSvavella mithyAveMbo
yuktigaLane KaMDisi jagat satyaveMdu dRuDhadi tOrida [5]
brahmanu guNaSUnyaneMdu durmatagaLa haraDuvavara
hammu muridu jagadi SAstra marmagaLanu vivarisida [6]
dUShyavAda ippattoMdu BAShyagaLanu muridu Suddha
BAShyagaLanu racisi tamma SiShyavargake sAra pELida [7]
SravaNa manana dhyAnagaLiM siriramaNana j~jAna poMdi
vara karuNava paDeyuvudE niruta suKake pathaveMdaruhida [8]
hanuma BIma madhva rUpadi rAma kRuShNa vEdavyAsara
niruta sEve mADi SrIhariyolimeyiM prasannarAda [9]
Leave a Reply