Composer : Shri Vidyaprasanna Tirtharu
ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟೆಯೊ ದೇವ
ತಂದೆ ನಿನ್ನಯ ಕರುಣವೆಂದಿಗೂ ಇರಲಿ [ಪ]
ಇಂದು ನೀನಿತ್ತ ನೂರೊಂದು ನಿನ್ನಯ ಪಾದ
ದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ [ಅ.ಪ]
ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿ
ನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೊ
ನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತು
ಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ [೧]
ನಿಟ್ಟುಸಿರು ಬಿಡಿಸಿದೆಯೊ ಹೊಟ್ಟೆಯನು ಸುಡಿಸಿದೆಯೊ
ಕಟ್ಟಕಡೆಯಲಿ ಕರವನಿತ್ತು ಮೇಲೆತ್ತಿದೆಯೊ
ಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದೊ
ಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ [೨]
ಕೆಸರಿನಲಿ ಕಂಬದಂತಿದ್ದ ಎನ್ನಯ ಸ್ಥಿತಿಯು
ಕುಸಿಯಲಿಲ್ಲವೊ ದೇವ ಶಶಿಕುಲ ಪ್ರಸನ್ನ
ಹೊಸದಾದ ಚೈತನ್ಯವೆನಗೆ ವಿಕಸಿತವಾಯ್ತು
ಉಸಿರಿರುವ ತನಕ ನಾ ಮರೆವುದಿಲ್ಲವೊ ನಿನ್ನ [೩]
oMdu prArthisalu nUroMdu koTTeyo dEva
taMde ninnaya karuNaveMdigU irali [pa]
iMdu nInitta nUroMdu ninnaya pAda
dvaMdvakarpisuve ninnaya sEve eMdenuta [a.pa]
ninna mUrtiya nODi ninna stutiyane mADi
ninna karadali piDidu puNyagaLisideno
ninna suMdara rUpa satata hRudayadi pottu
dhanyanAgiruveninnEnu bEkihudenage [1]
niTTusiru biDisideyo hoTTeyanu suDisideyo
kaTTakaDeyali karavanittu mElettideyo
kaTTubaNNavidalla suTTaridu pOgado
GaTTiyAyitu enna prEma ninnoLage [2]
kesarinali kaMbadaMtidda ennaya sthitiyu
kusiyalillavo dEva SaSikula prasanna
hosadAda caitanyavenage vikasitavAytu
usiriruva tanaka nA marevudillavo ninna [3]
Leave a Reply