Madhwarayara charite

Composer : Shri Vidyaprasanna Tirtharu

By Smt.Shubhalakshmi Rao

ಮಧ್ವರಾಯರ ಚರಿತೆ ಕೇಳಲು
ಶುದ್ಧವಾಯಿತು ಜನತೆ ||ಪ||

ತಿದ್ದಿತೆಲ್ಲರ ನಡತೆ ಸುಲಭದಿ
ಲಬ್ಧವಾಯಿತು ಘನತೆ ||ಅ.ಪ||

ಉತ್ತಮ ದಿವಿಜರ ಸತ್ಸಭೆಗಳಲಿ
ನಿತ್ಯ ಪಾಡುವ ಕಥೆ
ಮರ್ತ್ಯಲೋಕದ ಮದ ಮತ್ಸರ ರೋಗಕೆ
ಪಥ್ಯ ಮಾಡುವವರಿಗೆ ಉತ್ತಮವೀ ಕಥೆ ||೧||

ಇಲ್ಲಿಯ ಜೀವನ ಅಲ್ಲಿಗೆ ಸಾಧನ
ಎಲ್ಲಿಯು ಭೇದವ ತೋರಿದರು
ಕ್ಷುಲ್ಲಕ ಮತಗಳ ಬೆಲ್ಲದ ವಚನವು
ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||೨||

ಹರಿ ಗುರು ಕೃಪೆಯಿದು ಮರುದಂಶರ ಮೈ
ಮರೆಸುವ ಚರಿತೆಯು ಹರಿದುದು ಶ್ರವಣದೊಳ್
ದುರಿತವು ತೊಲಗಿತು ಪರಮ ಪ್ರಸನ್ನನ
ಪರಮ ಪದದ ರುಚಿಯರಿತರು ಸುಜನರು ||೩||


madhvarAyara carite kELalu
SuddhavAyitu janate ||pa||

tidditellara naDate sulaBadi
labdhavAyitu Ganate ||a.pa||

uttama divijara satsaBegaLali
nitya pADuva kathe
martyalOkada mada matsara rOgake
pathya mADuvavarige uttamavI kathe ||1||

illiya jIvana allige sAdhana
elliyu BEdava tOridaru
kShullaka matagaLa bellada vacanavu
salladAyitu balu balla mahAtma SrI ||2||

hari guru kRupeyidu marudaMSara mai
maresuva cariteyu haridudu SravaNadoL
duritavu tolagitu parama prasannana
parama padada ruciyaritaru sujanaru ||3||

Leave a Reply

Your email address will not be published. Required fields are marked *

You might also like

error: Content is protected !!