Keshava Keshava

Composer : Shri Vidyaprasanna Tirtharu

By Smt.Shubhalakshmi Rao

ಕೇಶವ ಕೇಶವನೆಂದು ನುಡಿಯಲು
ಈ ಸಂಸಾರದ ಕ್ಲೇಶ ತೊಲಗುವುದು [ಪ]

ಮಾಧವ ಮಾಧವನೆಂದು ನುಡಿಯಲು
ಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ]

ಗೋವಿಂದ ಗೋವಿಂದನೆಂದು ನುಡಿಯಲು
ಎಂದಿಗೂ ತೋರದ ನಂದವ ಪೊಂದುವಿ
ವಾಮನ ವಾಮನನೆಂದು ಪೊಗಳಲು
ತಾಮಸವಿಲ್ಲದೆ ಕಾಮಿತ ಪೊಂದುವಿ [೧]

ಶ್ರೀಧರ ಶ್ರೀಧರನೆಂದು ನುಡಿಯಲು
ಈ ಧರೆಯೊಳು ನಿನಗೆ ಖೇದವೆಲ್ಲಿಯದು
ಅಚ್ಚುತ ಅಚ್ಚುತನೆಂದು ಪೊಗಳಲು
ಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ [೨]

ನರಹರಿ ನರಹರಿಯೆಂದು ನುಡಿಯಲು
ಪರತರ ಸುಖವನು ನಿರುತವು ಪೊಂದುವಿ
ಶ್ರೀ ಕೃಷ್ಣನೆಂದು ಪೊಗಳಲು
ಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ [೩]

ರಾಘವ ರಾಘವನೆಂದು ಪೊಗಳಲು
ನೀಗುವೆ ಸುಲಭದಿ ಅಘಗಳೆಲ್ಲವನು
ಭಾರ್ಗವನೆನಲು ಪ್ರಸನ್ನನಾಗಿ ಹರಿ
ದುರ್ಗಮ ಮೋಕ್ಷಕೆ ಮಾರ್ಗವ ತೋರುವ [೪]


kESava kESavaneMdu nuDiyalu
I saMsArada klESa tolaguvudu [pa]

mAdhava mAdhavaneMdu nuDiyalu
mAdariyallida mOdava poMduvi [a.pa]

gOviMda gOviMdaneMdu nuDiyalu
eMdigU tOrada naMdava poMduvi
vAmana vAmananeMdu pogaLalu
tAmasavillade kAmita poMduvi [1]

SrIdhara SrIdharaneMdu nuDiyalu
I dhareyoLu ninage KEdavelliyadu
accuta accutaneMdu pogaLalu
ucca kuladi nI meccige poMduve [2]

narahari narahariyeMdu nuDiyalu
paratara suKavanu nirutavu poMduvi
SrI kRuShNaneMdu pogaLalu
kaShTavillade nI iShTava poMduvi [3]

rAGava rAGavaneMdu pogaLalu
nIguve sulaBadi aGagaLellavanu
BArgavanenalu prasannanAgi hari
durgama mOkShake mArgava tOruva [4]

Leave a Reply

Your email address will not be published. Required fields are marked *

You might also like

error: Content is protected !!