Kereyanu daatalu

Composer : Shri Vidyaprasanna Tirtharu

By Smt.Shubhalakshmi Rao

ಕೆರೆಯನು ದಾಟಲು ಅರಿಯದ ಜನ ಭವ
ಶರಧಿಯ ದಾಟುವರೇ ಶ್ರೀ ನರಹರೆ ||ಪ||

ಹರುಷದಿಂದಲಿ ಕರವ ಪಿಡಿಯದಿರೆ
ತೊರೆಯ ದಾಟಲಳವೆ ಈ ಧರೆಯೊಳು ||ಅ.ಪ||

ಹಲವು ಜನ್ಮಗಳಲಿ ಗಳಿಸಿದ ಅಘಗಳ
ಅಲೆಗಳೊಳಗೆ ಸಿಲುಕಿ ಸಂತತ
ಮುಳುಗಿ ಮುಳುಗಿ ಕಟು ಜಲಗಳ ಕುಡಿಯುತ
ನಳಿನನಾಭ ನಿನ್ನೊಲುಮೆಯಿಂದಲ್ಲದೆ [೧]

ಕಾಮ ಕ್ರೋಧ ಮದ ಲೋಭ ಮೋಹ
ಮತ್ಸರಗಳೆಂಬ ವಿವಿಧ ಜಲಚರ
ತಾಮಸ ನಕ್ರ ತಿಮಿಂಗಿಲವಿರಲಾಗಿ
ಕಾಮಜನಕ ನಿನ್ನ ಪ್ರೇಮವ ಪೊಂದದೆ [೨]

ಚೂರ್ಣಗಳಾದುವು ವಿವಿಧ ನಾವೆಗಳು ಈ
ಅರ್ಣವದಲಿ ಸಿಲುಕಿ ಸುಲಭದಿ
ಪೂರ್ಣ ಪ್ರಮತಿಗಳ ಮತವನರಿತು ನಿನ್ನ
ಪೂರ್ಣ ಪ್ರಸನ್ನತೆ ನಾವೆಯಿಂದಲ್ಲದೆ [೩]


kereyanu dATalu ariyada jana Bava
Saradhiya dATuvarE SrI narahare ||pa||

haruShadiMdali karava piDiyadire
toreya dATalaLave I dhareyoLu ||a.pa||

halavu janmagaLali gaLisida aGagaLa
alegaLoLage siluki saMtata
muLugi muLugi kaTu jalagaLa kuDiyuta
naLinanABa ninnolumeyiMdallade [1]

kAma krOdha mada lOBa mOha
matsaragaLeMba vividha jalacara
tAmasa nakra timiMgilaviralAgi
kAmajanaka ninna prEmava poMdade [2]

cUrNagaLAduvu vividha nAvegaLu I
arNavadali siluki sulaBadi
pUrNa pramatigaLa matavanaritu ninna
pUrNa prasannate nAveyiMdallade [3]

Leave a Reply

Your email address will not be published. Required fields are marked *

You might also like

error: Content is protected !!