Composer : Shri Vidyaprasanna Tirtharu
ಕವಳ ತಾಯಿ ಕವಳ ಅಮ್ಮ
ಪಾಪಿ ಪರದೇಶಿಯ ಮರಿಬೇಡಿರಮ್ಮ ||ಪ||
ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||೧||
ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೆ ಒಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತ ಹಸ್ತದ ಕವಳ
ಎಮಗೊಂದು ಕ್ಷಣದಲ್ಲಿ ಅಮೃತವಾಗೋದವ್ವ ||೨||
ಮಿತಿಯಿಲ್ಲದೈಶ್ವರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮಾ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ||೩||
kavaLa tAyi kavaLa amma
pApi paradESiya maribEDiramma ||pa||
saMjeya kavaLakke sAvira Apattu
aMji ODuvudeMdu kELillavEnamma
BuMjisi nimmaya patiya prasAdada
eMjalu enagiShTu jOLigegikravva ||1||
namadoMdu saMsAra balu doDDadavva
SramisuvaradaroLage obbarillavva
kamalavva nimmaya amRuta hastada kavaLa
emagoMdu kShaNadalli amRutavAgOdavva ||2||
mitiyilladaiSvarya nimagihudeMdu
kShitiyoLu j~jAnigaLADutaliharu
atula mahimA nimma patiya prasAdava
pratidinavittu prasannarAgiravva ||3||
Leave a Reply