Composer : Shri Vidyaprasanna Tirtharu
ಗೋವಿಂದ ಗೋವಿಂದ ಗೋವಿಂದನೆನ್ನಲು ||ಪ||
ಏನೆಂದು ಪೇಳಲಿ ಆನಂದವನು ನಾ ||ಅ.ಪ||
ಹಸಿವು ತೋರದೆನಗೆ ತೃಷೆಯು ತೋರದೆನಗೆ
ಹೊಸ ಹೊಸ ಪರಿ ನಾಮ ರಸವ ಸೇವಿಸುತಿರೆ [೧]
ದ್ವೇಷವು ತೋರದು ರೋಷವು ತೋರದು
ಶೇಷಶಯನ ನಿನ್ನ ಹರುಷದಿ ಪೊಗಳಲು [೨]
ಭಯವು ತೊಲಗುವುದು ಜಯವು ತೋರುವುದು
ನಯನಗಳಲಿ ಸುಖ ಜಲವು ಸುರಿಯುವುದು [೩]
ಎಂದಿನ ಪುಣ್ಯವೊ ಇಂದರಿತೆನು, ಗೋ-
ವಿಂದನಾಮ ಮಕರಂದದ ಸವಿಯನು [೪]
ನಿನ್ನ ಸುಕರುಣದ ಚಿನ್ಹೆ ಕಾಣಿಸಿತು, ಪ್ರ
ಸನ್ನನಾಗುವಿಯೆಂದು ಚೆನ್ನಾಗಿ ಅರಿತೆನು [೫]
gOviMda gOviMda gOviMdanennalu ||pa||
EneMdu pELali AnaMdavanu nA ||a.pa||
hasivu tOradenage tRuSheyu tOradenage
hosa hosa pari nAma rasava sEvisutire [1]
dvEShavu tOradu rOShavu tOradu
SEShaSayana ninna haruShadi pogaLalu [2]
Bayavu tolaguvudu jayavu tOruvudu
nayanagaLali suKa jalavu suriyuvudu [3]
eMdina puNyavo iMdaritenu, gO-
viMdanAma makaraMdada saviyanu [4]
ninna sukaruNada cinhe kANisitu, pra
sannanAguviyeMdu cennAgi aritenu [5]
Leave a Reply