Bhiksham dehime swamin

Composer : Shri Vidyaprasanna Tirtharu

By Smt.Shubhalakshmi Rao

ಭಿಕ್ಷಾಂ ದೇಹಿಮೇ ಸ್ವಾಮಿನ್
ಕುಕ್ಷಿಯು ತುಂಬುವ ತೆರದಲಿ ಭಕ್ತಿಯ [ಪ]

ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ
ಕುಕ್ಷಿಯು ಬರಿದಾಗಿರುವುದು ಭಕ್ತಿಯ [ಅ.ಪ]

ಆರುಮಂದಿ ಶತ್ರುಗಳಿರುವರು ಬಲು
ಕ್ರೂರರಿವರು ಎನ್ನನು ಬಿಡರೊ
ದೂರ ಕಳುಹಲು ಆಹಾರವು ಸಾಲದು
ಚೂರು ಮಾಡುವೆನು ಕರುಣದಿ ಶಮ ದಮ [೧]

ನಮ್ಮವರಿರುವರು ಹತ್ತುಮಂದಿಗಳು
ಸುಮ್ಮನಿರರು ಒಂದರಘಳಿಗೆ
ಸಮ್ಮತಿಗೊಡದಿರೆ ಬಳಲಿಸುವರು ಇವ
ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ [೨]

ಕತ್ತಲೆಯಲಿ ಬಂದಿರುವೆನು ಹೊಟ್ಟೆಯು
ಹತ್ತಿ ಹೋಯಿತೊ ಹಸಿವಿನಲಿ
ಎತ್ತ ಸುತ್ತಿದರೂ ತುತ್ತನು ಕಾಣೆನೊ
ಭಕ್ತ ಪ್ರಸನ್ನ ದಯಾ ಜಲನಿಧೇ ಜ್ಞಾನ [೩]


BikShAM dEhimE svAmin
kukShiyu tuMbuva teradali Baktiya [pa]

BikSheya bEDalu SikShitanallavo
kukShiyu baridAgiruvudu Baktiya [a.pa]

ArumaMdi SatrugaLiruvaru balu
krUrarivaru ennanu biDaro
dUra kaLuhalu AhAravu sAladu
cUru mADuvenu karuNadi Sama dama [1]

nammavariruvaru hattumaMdigaLu
summaniraru oMdaraGaLige
sammatigoDadire baLalisuvaru iva
rhammanu muriyuve viShaya viraktiya [2]

kattaleyali baMdiruvenu hoTTeyu
hatti hOyito hasivinali
etta suttidarU tuttanu kANeno
Bakta prasanna dayA jalanidhE j~jAna [3]

Leave a Reply

Your email address will not be published. Required fields are marked *

You might also like

error: Content is protected !!