Composer : Shri Vidyaprasanna Tirtharu
ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ||ಪ||
ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ||ಅ.ಪ||
ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು
ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು
ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು
ಮುದ್ದೆಯಾದ ನೆಲ ಮೃದುವಾಗುವ ಪರಿ ನೆಲವನುಳಲಿಬೇಕು [೧]
ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು
ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು
ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು
ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು [೨]
ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು
ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು
ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು
ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ [೩]
bEsAya mADabEku bEsAya mADabEku ||pa||
hRudayaveMba kShEtradali bEsAya mADabEku ||a.pa||
madhvAcAryaravara graMthagaLeMba sarOvara tuMbihudu
buddhi jalava varagurugaLeMba tUbinali taralibEku
Suddha dharmadAcaraNegaLeMba nEgila piDibEku
muddeyAda nela mRuduvAguva pari nelavanuLalibEku [1]
tatvajalavu haridODada pariyali tevari hAkabEku
suttalu durjana narigaLa taDiyalu bEli hAkabEku
uttama rItiya Bakuti pairugaLa nATi mADabEku
matte pairugaLu oNagadaMte jalavanu hAyisutirabEku [2]
beLeyuva viShayada anuBavadAseya kaLeyu kILabEku
koLeveya rOgake sajjana saMGada auShadhi koDabEku
kalipuruShana taleyeMba gobbarava tuLiyutalirabEku
kuLiteDeyali varaBakuta prasannanu koDuva mukuti davasa [3]
Leave a Reply