Composer : Shri Vidyaprasanna Tirtharu
ಬಂದಾ ಬಂದಾ ಮುಕುಂದ
ಇಂದಿರೆಯೊಡನೆ ನಿಲಯಕೆ ಬಂದಾ ||ಪ||
ಬೃಂದಾವನಾಂಚನನು ಶರ
ದಿಂದುವದನ ಮುನಿವೃಂದ ನುತಚರಿತ ||ಅ.ಪ||
ಭೇರಿ ಗಜ ತುರಗ ಪತಾಕ ತು
ತ್ತೂರಿ ವರ ಛತ್ರ ಚಾಮರ
ತಾಳ ಮೇಳ ಬಿರುದಾವಳಿ ಸಹಿತದಿ
ಪೌರಬೀದಿಯಲಿ ಮೆರೆಯುತ ಶೌರಿಯು [೧]
ಪಾರಿಜಾತ ಸುಜಾತ ಮಲ್ಲಿಕಾ
ಚಾರು ಮಾಲತೀಹಾರ ತುಳಸೀ
ಹಾರವನರ್ಪಿಸಿ ನೀರಜನಾಭನಿಗೆ
ನಾರಿಜನರು ಆರತಿಯನು ಬೆಳಗಿರೆ [೨]
ವೇದಘೋಷ ಜಯಘೋಷ ಜನರ ಸಂ
ತೋಷ ಧ್ವನಿಯು ತುಂಬಿತು ಗಗನ
ಯಾದವ ವಂಶ ಪ್ರಸನ್ನನು ಎಮ್ಮವ
ನಾದನಿಂದು ಹಿರಿದಾಯಿತು ಜನುಮವು [೩]
baMdA baMdA mukuMda
iMdireyoDane nilayake baMdA ||pa||
bRuMdAvanAMcananu Sara
diMduvadana munivRuMda nutacarita ||a.pa||
BEri gaja turaga patAka tu
ttUri vara Catra cAmara
tALa mELa birudAvaLi sahitadi
paurabIdiyali mereyuta Sauriyu [1]
pArijAta sujAta mallikA
cAru mAlatIhAra tuLasI
hAravanarpisi nIrajanABanige
nArijanaru Aratiyanu beLagire [2]
vEdaGOSha jayaGOSha janara saM
tOSha dhvaniyu tuMbitu gagana
yAdava vaMSa prasannanu emmava
nAdaniMdu hiridAyitu janumavu [3]
Leave a Reply