Datta nammani daiva

Composer : Shri Mahipati dasaru

By Smt.Shubhalakshmi Rao

ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ
ಎತ್ತ ಹೋದರು ನಮ್ಮ ಹತ್ತಿಲಿಹನೊ [೧]

ಸುತ್ತ ಸೂಸುತಲಿಹ್ಯ ನಿತ್ಯ ನಿಜ ಘನವಾಗಿ
ಹೃತ್ಕಮಲದೊಳು ತಾಂ ಮುತ್ತಿನಂತೆ [೨]

ಗುತ್ತಳಿದು ಒಳಗ ತಾಂ ಪುಥ್ಥಳಿಯು ಹೊಳೆವ ಪರಿ
ಮೊತ್ತವಾಗಿಹ್ಯ ಪೂರ್ಣ ನೆತ್ತಿವೊಳಗ [೩]

ದತ್ತವುಳ್ಳವನಿಗೆ ಹತ್ತಿಸಂಗಡ ಬಾಹ
ವಿತ್ತ ಒಡಿವ್ಯಾಗೆ ತಾಂ ಕರ್ತುನಮ್ಮ [೪]

ದತ್ತಗಿಂದಧಿಕ ಮತ್ತೊಂದು ದೈವವು ಕಾಣೆ
ಪೃಥ್ವಿಯೊಳು ಮಹಿಪತಿವಸ್ತು ಒಂದೆ [೫]


datta nammani daiva cittamanadoLagihya
etta hOdaru namma hattilihano [1]

sutta sUsutalihya nitya nija GanavAgi
hRutkamaladoLu tAM muttinaMte [2]

guttaLidu oLaga tAM puththaLiyu hoLeva pari
mottavAgihya pUrNa nettivoLaga [3]

dattavuLLavanige hattisaMgaDa bAha
vitta oDivyAge tAM kartunamma [4]

dattagiMdadhika mattoMdu daivavu kANe
pRuthviyoLu mahipativastu oMde [5]

Leave a Reply

Your email address will not be published. Required fields are marked *

You might also like

error: Content is protected !!