Pranesha bhavi – Ashvadhati

Composer : Shri Gurugovinda dasaru

By Smt.Shubhalakshmi Rao

ಪ್ರಾಣೇಶ ಭಾವಿ ಬ್ರಹ್ಮಾಣಿ ಪತಿ ಎನಿಸಿ |
ವೀಣೆಯನು ಪಿಡಿಯುತ್ತಲೀ ||
ಕ್ಷೋಣಿ ಬೆಳಗಾವಿ ಬ್ರಾಹ್ಮಣ |
ಶ್ರೇಣಿಯಲಿ ನೀ ನಿಂತೆಯೋ ||
ಕಾಣೆನೊ ನಿನಗೆಣೆಯ |
ಕಾಣೆ ಕರುಣಿಗಳರಸ ಜ್ಞಾನಿ ಜನ
ಮನೊವಾಂಛಿತಾ | ಮಾಣದಲೆ ನೀ ನೀವೆ |
ಪ್ರಾಣ ಪದಕನೆ ಹನುಮ
ಜ್ಞಾನ ಭಕುತಿಯ ಬೇಡುವೇ [೧]

ಲಾತವ್ಯರೆಂದೆನಿಸಿ | ವಾತ ಪದ ಅರ್ಹ ಋಜು |
ಖ್ಯಾತರಂ ತುತಿಸುತಲಿ ಮೆರೆವಾ ||
ದೂತ ವೆಂಕಣ್ಣಾರ್ಯ | ಪ್ರೀತಿಂದ ನಿನ ನಿಲಿಸಿ |
ಪೋತ ಭಾವದಿ ಮೆರೆದರೂ ||
ವಾತ ಸುತ ನಿನ ಕರುಣ |
ವ್ರಾತ ಕಿನ್ನೆಣೆಯುಂಟೆ
ಮಾತುಳಾರಿಯ ದೂತ ಜಯೆ ಜಾತಾ ||
ಸೋತು ಬಲು ಭವದೊಳಗೆ |
ಆರ್ತನಾಗುತ ನಿನ್ನ ಕಾತುರೆತಲಿಂ ಪ್ರಾರ್ಥಿಪೇ [೨]

ವೃಂದಾವನಾರ್ಯರಿಂದ್ ವಂದಿತವು
ಎಂದೆನಿಪ ವೃಂದಾವನಿಲ್ಲಿ ಇಹುದೂ |
ವೃಂದಾರ ಕೇಂದ್ರ ಜನ | ಬಂದಿಲ್ಲಿ ರಾಜರ |
ವೃಂದಾವನರ್ಚಿಸುವರೋ |
ನಂದನನು ದಶರಥಗೆ | ನಂದನನು ದೇವಕಿಗೆ |
ನಂದನನು ಸತ್ಯವತಿಗೇ |
ಒಂದೊಂದು ಹಯಶೀರ್ಷ |
ಅಂದ ರೂಪಗಳಿಂದ
ನಂದನನು ಭಕ್ತ ಜನಕೇ [೩]

ಜೀವಾಂತರಂಗದಲಿ | ಜೀವಾಂತರಾತ್ಮನನ
ದ್ವೈವಿಧ್ಯ ರೂಪ ಸೇವಾ |
ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ
ಸೇವಿಸುವೆ ಘರ್ಮೋಕ್ತದಿ ||
ಜೀವ ಸಕಲೋತ್ತಮನೆ |
ದಾವ ಶಿಖಿ ಭವವನಕೆ
ದೇವ ಬಲಿ ಭುಜ ಮಾರುತೀ |
ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನ
ಭಾವದಲಿ ತೋರಿ ಪೊರೆಯೊ [೪]


prANESa BAvi brahmANi pati enisi |
vINeyanu piDiyuttalI ||
kShONi beLagAvi brAhmaNa |
SrENiyali nI niMteyO ||
kANeno ninageNeya |
kANe karuNigaLarasa j~jAni jana
manovAMCitA | mANadale nI nIve |
prANa padakane hanuma
j~jAna Bakutiya bEDuvE [1]

lAtavyareMdenisi | vAta pada arha Ruju |
KyAtaraM tutisutali merevA ||
dUta veMkaNNArya | prItiMda nina nilisi |
pOta BAvadi meredarU ||
vAta suta nina karuNa |
vrAta kinneNeyuMTe
mAtuLAriya dUta jaye jAtA ||
sOtu balu BavadoLage |
ArtanAguta ninna kAturetaliM prArthipE [2]

vRuMdAvanAryariMd vaMditavu
eMdenipa vRuMdAvanilli ihudU |
vRuMdAra kEMdra jana | baMdilli rAjara |
vRuMdAvanarcisuvarO |
naMdananu daSarathage |
naMdananu dEvakige |
naMdananu satyavatigE |
oMdoMdu hayaSIrSha | aMda rUpagaLiMda
naMdananu Bakta janakE [3]

jIvAMtaraMgadali | jIvAMtarAtmanana
dvaividhya rUpa sEvA |
tAvakadi nI mAtariSvAKyaneMdenisi
sEvisuve GarmOktadi ||
jIva sakalOttamane |
dAva SiKi Bavavanake
dEva bali Buja mArutI |
dEvAdi vaMdya guru | gOviMda viThThalana
BAvadali tOri poreyo [4]

Leave a Reply

Your email address will not be published. Required fields are marked *

You might also like

error: Content is protected !!