Composer : Shri Vidyaprasanna Tirtharu
ಪ್ರಾಣನಾಥ ಪ್ರಾಣನಾಥ ತ್ರಿಭುವನ ಚೇಷ್ಟ ಪ್ರದಾತಾ ||ಪ||
ಅಖಿಲನೇತಾ ಸುಗುಣಜಾತಾ ಶೂರ ಸೀತಾ ರಾಘವದೂತ ||ಅ.ಪ||
ನೂರು ಯೋಜನ ಶರಧಿಯ ಹಾರಿ ಲಂಕಾಪುರವ
ಸೇರಿ ಹರುಷದಿ ಜನಕ ಕುಮಾರಿಗುಂಗುರವಿತ್ತ [೧]
ದುಷ್ಟ ದಶ ಕಂಧರನನು ಮುಷ್ಟಿತಾಡನದಿಂದ
ಚೇಷ್ಟ ರಹಿತನ ಮಾಡಿ ದಿಟ್ಟತನದಲಿ ಮೆರೆದ [೨]
ಗಂಧ ಮಾದನ ಗಿರಿಯನು ಒಂದು ಕರದಲಿ ಸುಖದಿ
ತಂದು ರಾಮರ ಪಾದ ದ್ವಂದ್ವಕೆರಗಿದ ಮುಖ್ಯ [೩]
ಕ್ರೂರ ನಿಶೇಚರ ಪತಿ ಪರಿವಾರವನು ಸದೆ ಬಡಿದು
ಮೂರು ಜಗಗಳ ಮೀರಿದ ಕೀರುತಿಯ ಪೊಂದಿದ [೪]
ಇನ್ನು ಎರಡವತಾರಗಳನು ಧರಿಸುತ ಜಗದಿ ಪ್ರ
ಸನ್ನ ಮಾಧವ ವ್ಯಾಸರನ್ನು ಸೇವೆಯ ಮಾಡಿದ [೫]
prANanAtha prANanAtha triBuvana cEShTa pradAtA ||pa||
aKilanEtA suguNajAtA SUra sItA rAGavadUta ||a.pa||
nUru yOjana Saradhiya hAri laMkApurava
sEri haruShadi janaka kumAriguMguravitta [1]
duShTa daSa kaMdharananu muShTitADanadiMda
cEShTa rahitana mADi diTTatanadali mereda [2]
gaMdha mAdana giriyanu oMdu karadali suKadi
taMdu rAmara pAda dvaMdvakeragida muKya [3]
krUra niSEcara pati parivAravanu sade baDidu
mUru jagagaLa mIrida kIrutiya poMdida [4]
innu eraDavatAragaLanu dharisuta jagadi pra
sanna mAdhava vyAsarannu sEveya mADida [5]
Leave a Reply