Kondalalave karunanidhi

Composer : Shri Prasannavenkata dasaru

By Smt.Shubhalakshmi Rao

Shri Satyanatha Tirtharu : 1660-1673
satyanaathaguru: paatu yO dhIrO navachaMdrikaam |
navaamRutagadaatIrthataaMDavaani vyachIklRupat |
ಸತ್ಯನಾಥಗುರು: ಪಾತು ಯೋ ಧೀರೋ ನವಚಂದ್ರಿಕಾಮ್ |
ನವಾಮೃತಗದಾತೀರ್ಥತಾಂಡವಾನಿ ವ್ಯಚೀಕ್ಲೃಪತ್ |
Vrundavana – Veeracholapuram, TN
Ashrama Gurugalu – Sri Satyanidhi Tirtharu, Kurnool
Ashrama Shishyaru – Sri Satyabhinavatirtharu, Nachiarkoil
Aradhana – Margashira Shudda Ekadashi (Geeta jayanti)


ಕೊಂಡಾಡಲಳವೆ ಕರುಣಾನಿಧಿ ಕಾವನ
ದಂಡ ಸಂಜಿತ ಗುರು ಸತ್ಯನಾಥರ ಕೀರ್ತಿ [ಪ]

ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿ
ಭೂವಲಯಕೆ ಸುಜನಾವಳಿಗ್-ಆಶ್ರಯ-
ವೀವೆನೆನುತ ಶುಭ ದೇವ ವೃಕ್ಷವನಟ್ಟೆ
ಈವರ ಪರಮ ಹಂಸಾವಲಂಬನ ತಾಳ್ದು
ಶ್ರೀ ವಾಯುಮತದಿ ತತ್ವವೆ ಲಕ್ಷಿಸುವ
ಪ್ರೇಕ್ಷಾವಂತರಾಗಿಹ ಜೀವ ಕೋಟಿಗಳ
ಕೃಪಾವಲೋಕನ-ದೊಳಿಟ್ಟ ಅಪೇಕ್ಷಿತ
ಭಾವಾರ್ಥಗಳನೆ ಕೊಟ್ಟು
ನಂಬಿದ ಸೇವಕರ್ಗ ಭಯವಿಟ್ಟ ಗುರುರಾಯನ [೧]

ಭಾನುತೋರುವ ಮುನ್ನೆ ಸ್ನಾನವ ಮಾಡಿ
ಸುಮ್ಮಾನದಿಂದಲಿ ನೇಮ ಮೌನದೊಳಿದ್ದು
ಶ್ರೀಮಾನಾಥ-ನಂಘ್ರಿಯ ಮಾನಸದಲಿ ದೃಢ
ಧ್ಯಾನದಿಂ ಬಲಿದು ಗೀರ್ವಾಣ ಭಾಷ್ಯಾಮೃತ
ಪಾನವ ಜನರಿಗೆ ಸಾನುರಾಗದಲಿತ್ತು
ನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆ
ತಾನಂದು ಬೋಧಿಸಿದ ತಾಮಸ ಜ್ಞಾನವನೋಡಿಸಿದ
ಆ ಕಾಮಧೇನುವೆನಿಸಿ ಎಸೆದ ಗುರುರಾಯನ [೨]

ಭೇದವರ್ಜಿತ ಮತ್ತವಾದ ಕುಂಭಿಯ
ಕುಂಭ ಭೇದ ಕಸಿಂಗ ಹಲಾಧಾರಿ ಹರಿಸ
ಗುಣೋದರ ಸಾಕಾರ ಮಾಧವ ಹರನುತ
ಪಾದನೆನುತ ಸೂತ್ರವೇದ ಪುರಾಣದಿ
ಸಾಧಿಸಿ ಕುತ್ಸಿತ ವಾದಿಗಳ ಪಾದಾ
ಕ್ರಾಂತರ ಮಾಡಿ ಮೇದಿನಿಯೊಳು ಜಯ
ನಾದ ಭೇರಿಯ ಹೊಯಿಸಿದ ಮುಕ್ತಿಯ ಸಾಧನ ತೋರಿಸಿದ
ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ [೩]

ಕಾಲಕಾಲಕೆ ಧರ್ಮ ಪಾಲಿಸಿ ಯಾಚಕ
ಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶ
ಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪ
ಹೋಳಿಗ್ಯನ್ನವ-ನಿಕ್ಕಿ ಮೇಲೆ ದ್ರವ್ಯವನಿತ್ತು
ಪಾಲಿಸಿ ತಾಯಿತಂದೆಗಳ ಹಂಬಲ
ಬಿಡಿಸಿ ಲೋಕದವರಿ-ಗಭಿಲಾಷಾ ಪೂರ್ಣಾನು
ಕೂಲ ಚಿಂತಾಮಣಿ ಯತಿಕುಲ ಮೌಳಿ
ಮುಕುಟ ಮಣಿಯ
ವಿರತಿ ಭಾಗ್ಯಶಾಲಿ ಸುಗುಣ ಖಣಿಯ ಗುರುರಾಯನ [೪]

ಮಣ್ಣು ವನಿತೆ ಸತಿ ಹೊನ್ನಿನ ಬಯಕೆಯ
ಘನ್ನತೆ ಜರಿದು ಪಾವನ್ನ ಮಹಿಮನಾದ
ಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವ
ತನ್ನಾಕಷೆಂಬುವ ಭಿನ್ನವ ಚಂದ್ರಿಕೆ-ಯನ್ನು
ಪ್ರಕಾಶಿಸಿ ಪೂರ್ಣ ಚಂದ್ರಮನಂತೆ
ಉನ್ನತ ಕಳೆಯುತ ಚಿನ್ಮಯ ವರದ
ಪ್ರಸನ್ನ ವೆಂಕಟಾಧಿಪನ ಭಜಿಸಿ ನಿತ್ಯ
ಧನ್ಯ-ನೆನಿಸುತಿಪ್ಪನ
ಸತ್ಯಾಭಿನವ-ರನ್ನನ ಪೊರೆದಪ್ಪನ ಗುರುರಾಯನ [೫]


koMDADalaLave karuNAnidhi kAvana
daMDa saMjita guru satyanAthara kIrti [pa]

SrI vAsudEda tA BAvisi cittadi
BUvalayake sujanAvaLig-ASraya-
vIvenenuta SuBa dEva vRukShavanaTTe
Ivara parama haMsAvalaMbana tALdu
SrI vAyumatadi tatvave lakShisuva
prEkShAvaMtarAgiha jIva kOTigaLa
kRupAvalOkana-doLiTTa apEkShita
BAvArthagaLane koTTu
naMbida sEvakarga BayaviTTa gururAyana [1]

BAnutOruva munne snAnava mADi
summAnadiMdali nEma maunadoLiddu
SrImAnAtha-naMGriya mAnasadali dRuDha
dhyAnadiM balidu gIrvANa BAShyAmRuta
pAnava janarige sAnurAgadalittu
nAnA tatvArtha vyAKyAnava janarige
tAnaMdu bOdhisida tAmasa j~jAnavanODisida
A kAmadhEnuvenisi eseda gururAyana [2]

BEdavarjita mattavAda kuMBiya
kuMBa BEda kasiMga halAdhAri harisa
guNOdara sAkAra mAdhava haranuta
pAdanenuta sUtravEda purANadi
sAdhisi kutsita vAdigaLa pAdA
krAMtara mADi mEdiniyoLu jaya
nAda BEriya hoyisida muktiya sAdhana tOrisida
BraShTaMkurOdaya mANisida gururAyana [3]

kAlakAlake dharma pAlisi yAcaka
jAlake mannisi mUla maMtrOpadESa
pELi pUtara mADi hAlu sakkare tuppa
hOLigyannava-nikki mEle dravyavanittu
pAlisi tAyitaMdegaLa haMbala
biDisi lOkadavari-gaBilAShA pUrNAnu
kUla ciMtAmaNi yatikula mauLi
mukuTa maNiya
virati BAgyaSAli suguNa KaNiya gururAyana [4]

maNNu vanite sati honnina bayakeya
Gannate jaridu pAvanna mahimanAda
cenna satyanidhi tIrathanna karOdBava
tannAkaSheMbuva Binnava caMdrike-yannu
prakASisi pUrNa caMdramanaMte
unnata kaLeyuta cinmaya varada
prasanna veMkaTAdhipana Bajisi nitya
dhanya-nenisutippana
satyABinava-rannana poredappana gururAyana [5]

Leave a Reply

Your email address will not be published. Required fields are marked *

You might also like

error: Content is protected !!