Composer : Shri Vyasarajaru
ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರ
ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ || ಪ ||
ಶ್ಲೋಕ
ಕುರುಕ್ಷೇತ್ರದಿ ಎನ್ನವರು ಪಾಂಡವರು |
ಪೇಳೋ ಸಂಜಯ ಏನು ಮಾಡುವರು ಕೂಡಿ |
ಕೇಳೈಯ್ಯ ಅರಸನೇ ನೋಡಿ ಪಾಂಡವರ ಸೇನಾ |
ಮಾತಾಡಿದ ನಿನ್ನ ಸುತ ದ್ರೋಣಗಿಂತು ||
ಪದ
ಕೇಳಿ ತಾ ಪಾರ್ಥನು ಕುರು ದಂಡ
ರಣದಲಿ ಚಂಡ | ಗಾಂಡೀವ ಕರದಂಡ ||
ಅಚ್ಯುತ ಪಿಡಿರಥ ನಡೆ ಮುಂದ
ಬಹು ತ್ವರದಿಂದ | ನೋಡುವೆ ನೇತ್ರದಿಂದ ||
ಗುರುಹಿರಿಯರ ಕೂಡ ಯಾಕೆಂದ
ಯುದ್ಧ ಸಾಕೆಂದ | ಭಿಕ್ಷವೆ ಸುಖವೆಂದ ||
ಕುಂತಿಸುತ ಈ ಮಾತು ಉಚಿತಲ್ಲ
ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ || ೧ ||
ಶ್ಲೋಕ
ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ
ಇಂಥ ದೇಹಕೆ ಮೋಹ ಮತ್ತ್ಯಾಕಿಲ್ಲಿ |
ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ
ಬಿಲ್ಲು ಪಿಡಿದು ಕೀರ್ತಿ ಪಡೆ ಲೋಕದಲ್ಲಿ ||
ಪದ
ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ
ಈ ದೇಹಕ್ಕೆ | ಪಾವಕನ ದಾಹಕ್ಕೆ |
ಉದಕಗಳಿಂದ ವೇದನೆ ಯಾಕೆ
ಜೀವಕ್ಕೆ | ಮಾರುತದ ಶೋಷಕ್ಕೆ
ನಿತ್ಯ ಅಭೇದ್ಯ ತಾ ಜೀವನ
ಸನಾತನ | ವಸ್ತ್ರದ್ಹಾಂಗೆ ಈ ತನವು |
ನನಗಿಲ್ಲಯ್ಯ | ಅದನಾ ಬಲ್ಲೆನಯ್ಯಾ || ೨ ||
ಶ್ಲೋಕ
ಜ್ಞಾನ ದೊಡ್ಡದು ಕರ್ಮ ಬಂಧನವ ಬಿಟ್ಟು
ಕರ್ಮ ಬಿಟ್ಟರೆ ಪ್ರತ್ಯವಾಯದಿಷ್ಟು |
ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ
ಸಮ ದೇಹಕೆ ಫಲ ಕರ್ಮ ಕಾರಣವಲ್ಲ ||
ಪದ
ಕರ್ಮದಲ್ಲೆ ನಿನಗಧಿಕಾರ
ಫಲ ತಾ ದೂರ | ಧನಂಜಯಗೋಸ್ಕರ |
ಇತ್ತ ಬಾರಯ್ಯ | ಯೋಗ ಬುದ್ಧಿ ಮಾಡಯ್ಯ |
ಜಿತ ಬುದ್ಧಿ ಯಾವುದೈ ಕೇಶವ | ಜಗತ್ಪಾಶವ |
ನೋಡದೇ ಪರಮೇಶ ಗೋವಿಂದನಲಿ | ಮನವಿಟ್ಟವ |
ಕಾಮ ಬಿಟ್ಟವ | ಜಿತ ದೇಹ ತಾನಾದ || ೩ ||
ಶ್ಲೋಕ
ಜ್ಞಾನ ದೊಡ್ಡದು ಕರ್ಮದಲ್ಲ್ಯಾಕೆ ಎನ್ನ
ಬುದ್ಧಿ ಮೋಹಿಸಿ ಕೃಷ್ಣ ಕೇಳಯ್ಯ ಬಿನ್ನಪ ||
ಕರ್ಮವಿಲ್ಲದೆ ಮೋಕ್ಷವುಂಟೆ ಇನ್ನು
ಕರ್ಮ ಮೋಕ್ಷದ ಬುದ್ಧಿಗೆ ಬೀಜವಲ್ಲೆ ||
ಪದ
ಯುದ್ಧ ಕರ್ಮವ ಮಾಡೋ ಪಾಂಡವ
ರಣ ತಾಂಡವ | ವೈರಿ ಷಂಡನೆಂಬುವ |
ಜನರೆಲ್ಲ ಮಾಳ್ಪರೋ ನಿನ್ನ ನೋಡಿ
ಮತ್ತೇನ ನೋಡಿ | ನೋಡಿದರ ನೀ ಬೇಡಿ |
ಎನಗ್ಯಾಕೆ ಪೇಳಯ್ಯ ಜನ ಕರ್ಮ
ಕ್ಷತ್ರಿಯ ಧರ್ಮ | ನಷ್ಟವಾಗುವದು ಧರ್ಮ |
ಅರ್ಪಿಸು ಎನ್ನಲ್ಲಿ ಸರ್ವವು
ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವವು || ೪ ||
ಶ್ಲೋಕ
ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು
ಭೋಗ ವರ್ಜಿತ ಕೀಳು ಸನ್ಯಾಸಿಯಿರವು |
ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ
ಹಾಗೆ ಭಕ್ತಿಗೆ ಸಂಸೃತಿಯು ಇಲ್ಲ ||
ಪದ
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ
ಸಮ ನಾನಲ್ಲಿ | ಭಜಿಪರ ಮನದಲ್ಲಿ
ಮನಸು ಯಾರ ಜೀವಕೆ ಬಂದು
ಇತ್ತ ಬಾರೆಂದು | ಮತ್ತೆ ವೈರಿ ದಾರೆಂದು |
ಲೋಷ್ಟಕಾಂಚನ ನೋಡು ಸಮ ಮಾಡಿ |
ಆಸನ ಹೂಡಿ | ನಾಶಿಕ ತುದಿ ನೋಡಿ | ಧ್ಯಾನ ಮಾಡು
ಹರಿ ಅಲ್ಲಿಹ ಅವನಲ್ಲಿಹ | ಯೋಗ ಸನ್ನಿಹಿತನವನೇ || ೫ ||
ಶ್ಲೋಕ
ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ
ಘೋರ ಸಂಸಾರ ಯಾತನೆ ಅವರಿಗೆಲ್ಲಿ |
ಶರೀರವೆ ಕ್ಷೇತ್ರವೆಂತೆಂದು ತಿಳಿಯೋ |
ಮರೆಯದೆ ಕ್ಷೇತ್ರಜ್ಞನೆಂದೆನ್ನ ತಿಳಿಯೋ ||
ಪದ
ಶರೀರದೊಳಗಿದ್ದು ಪಾಪಿಲ್ಲ ದುಃಖ ಲೇಪಿಲ್ಲ |
ಆಕಾಶವು ಎಲ್ಲಾ| ಮೂರು ಸದ್ಗುಣ | ಕೇಳೈಯ್ಯ ಫಲ್ಗುಣ |
ಸುಖ ದುಃಖ ಸಮ ಮಾಡಿ ನೋಡು ನೀ |
ಈಡ್ಯಾಡು ನೀ | ಬ್ರಹ್ಮನ ನೋಡು ನೀ |
ಸೂರ್ಯ ಚಂದ್ರರ ತೇಜ ನನದಯ್ಯ
ಗುಡಾಕೇಶಯ್ಯ | ಅನ್ನ ಪಚನ ನನ್ನದಯ್ಯ || ೬ ||
ಶ್ಲೋಕ
ನಾನೇ ಉತ್ತಮ ಮನಸು ಎನ್ನಲ್ಲಿ ಮಾಡೋ
ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ
ಜ್ಞಾನ ದುರ್ಲಭ ಅವರ ಭಕ್ತಿಗಳಂತೆ
ನಾನು ಕೊಡುವೆನು ಫಲವ ಮನಸು ಬಂದಂತೆ ||
ಪದ
ಸ್ಮರಣೆ ಮಾಡುತ ದೇಹ ಬಿಡುವರೋ
ನನ್ನ ಪಡೆವರೋ | ಬಲು ಭಕ್ತಿ ಮಾಡುವರೋ |
ಅನಂತ ಚೇತನ ಸುಳಿವೆನು
ಹರಿ ಸುಲಭನು | ಮತ್ತೆ ಜನನವಿಲ್ಲವಗೆ |
ಎನ್ನ ಭಕ್ತರಿಗಿಲ್ಲ ನಾಶವು
ಸ್ವರ್ಗದಾಶವು | ಬಿಟ್ಟು ಚರಣ ಭಕುತಿಯ || ೭ ||
ಶ್ಲೋಕ
ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ |
ಇಷ್ಟ ಪೂರ್ತಿಯಾಗಲೊ ಎನಗೆ ಶ್ರೀಪ |
ರಾಮ ನಾನಯ್ಯ ರಾಜರ ಗುಂಪಿನಲ್ಲಿ
ಸೋಮ ನಾನಯ್ಯ ತಾರಕ ಮಂಡಲದಲ್ಲೀ ||
ಪದ
ಅಕ್ಷರದೊಳಗೆ ಅಕಾರನು ಗುಣಸಾರನು |
ಪಕ್ಷಿಗಳಲಿ ನಾನು ಗರುಡನು | ಸಕಲ ಜಾತಿಗಳಲ್ಲಿ
ಶ್ರೇಷ್ಟತನದಲಿ | ಎನ್ನ ರೂಪ ತಿಳಿಯಲ್ಲಿ |
ತೋರಿಸೋ ಶ್ರೀ ಕೃಷ್ಣ ನಿನ್ನ ರೂಪ |
ನಾನಾ ರೂಪ | ಅರ್ಜುನ ನೋಡೋ ರೂಪ |
ಕಂಡನು ತನ್ನನು ಸಹಿತದಿ |
ಹರಿ ದೇಹದಿ | ಬ್ರಹ್ಮಾಂಡಗಳಲ್ಲಿ || ೮ ||
ಶ್ಲೋಕ
ಕ್ಷರ ಅಕ್ಷರ ಎರಡಕ್ಕೂ ಉತ್ತಮನು ನಾನು |
ಘೋರ ನರಕಕ್ಕೆ ಲೋಭ ಕಾಮನು ನಾನು |
ಸಾರ ದಾನವು ಸಜ್ಜನರ ಹಸ್ತದಲ್ಲಿ
ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿ ||
ಪದ
ಸರ್ವ ದಾನದಕಿಂತ ಎನಭಕ್ತಿ
ಕೇಳೊ ಭೂಶಕ್ತಿ | ಮಾಡಯ್ಯ ವಿರಕ್ತಿ |
ಕೃಷ್ಣ ಹರಣವಾಯ್ತು ನಿನ್ನಿಂದ
ಮೋಹ ಎನ್ನಿಂದ | ಬಹು ಸುವಾಕ್ಯದಿಂದ |
ಕೃಷ್ಣ ಭೀಮಾನುಜರ ಸಂವಾದ
ಮಹ ಸುಖಪ್ರದ | ಧೃತರಾಷ್ಟ್ರ ಕೇಳಿದ |
ಬಲ್ಲೆನು ವ್ಯಾಸರ ದಯದಿಂದ |
ಮನಸಿನಿಂದ | ಕೃಷ್ಣ ನಲ್ಲೇ ಜಯವೆಂದ || ೯ ||
|| ಶ್ರೀವ್ಯಾಸರಾಯವಿರಚಿತ ಭಗವದ್ಗೀತಾಸಾರವು
ಸಮಾಪ್ತವಾಯಿತು ||
SrI vyAsarAyaru racisida BagavadgItAsAra
kELayya enna mAtu pArthane gItAdarthane || pa ||
SlOka
kurukShEtradi ennavaru pAMDavaru |
pELO saMjaya Enu mADuvaru kUDi |
kELaiyya arasanE nODi pAMDavara sEnA |
mAtADida ninna suta drONagiMtu ||
pada
kELi tA pArthanu kuru daMDa
raNadali caMDa | gAMDIva karadaMDa ||
acyuta piDiratha naDe muMda
bahu tvaradiMda | nODuve nEtradiMda ||
guruhiriyara kUDa yAkeMda
yuddha sAkeMda | BikShave suKaveMda ||
kuMtisuta I mAtu ucitalla
ninagidu salla | piDi gAMDIva billa || 1 ||
SlOka
bAlya yauvana mupputana dEhadalli
iMtha dEhake mOha mattyAkilli |
kAydu kolluva nAnu irutiralu illi
billu piDidu kIrti paDe lOkadalli ||
pada
SastradaMjikeyilla jIvakke
I dEhakke | pAvakana dAhakke |
udakagaLiMda vEdane yAke
jIvakke | mArutada SOShakke
nitya aBEdya tA jIvana
sanAtana | vastrad~hAMge I tanavu |
nanagillayya | adanA ballenayyA || 2 ||
SlOka
j~jAna doDDadu karma baMdhanava biTTu
karma biTTare pratyavAyadiShTu |
Pala biTTu nI mADu satkarmagaLa
sama dEhake Pala karma kAraNavalla ||
pada
karmadalle ninagadhikAra
Pala tA dUra | dhanaMjayagOskara |
itta bArayya | yOga buddhi mADayya |
jita buddhi yAvudai kESava | jagatpASava |
nODadE paramESa gOviMdanali | manaviTTava |
kAma biTTava | jita dEha tAnAda || 3 ||
SlOka
j~jAna doDDadu karmadallyAke enna
buddhi mOhisi kRuShNa kELayya binnapa ||
karmavillade mOkShavuMTe innu
karma mOkShada buddhige bIjavalle ||
pada
yuddha karmava mADO pAMDava
raNa tAMDava | vairi ShaMDaneMbuva |
janarella mALparO ninna nODi
mattEna nODi | nODidara nI bEDi |
enagyAke pELayya jana karma
kShatriya dharma | naShTavAguvadu dharma |
arpisu ennalli sarvavu
biTTu garvavu | tiLi ennoLu sarvavu || 4 ||
SlOka
yOga sanyAsa eraDu muktige dhRuDavu
BOga varjita kILu sanyAsiyiravu |
hEge padmake vAriya lEpavilla
hAge Baktige saMsRutiyu illa ||
pada
ajanalli dvijanalli gajadalli
sama nAnalli | Bajipara manadalli
manasu yAra jIvake baMdu
itta bAreMdu | matte vairi dAreMdu |
lOShTakAMcana nODu sama mADi |
Asana hUDi | nASika tudi nODi | dhyAna mADu
hari alliha avanalliha | yOga sannihitanavanE || 5 ||
SlOka
yAra Baktiyu enna pAdAbjadalli
GOra saMsAra yAtane avarigelli |
SarIrave kShEtraveMteMdu tiLiyO |
mareyade kShEtraj~janeMdenna tiLiyO ||
pada
SarIradoLagiddu pApilla duHKa lEpilla |
AkASavu ellA| mUru sadguNa | kELaiyya PalguNa |
suKa duHKa sama mADi nODu nI |
IDyADu nI | brahmana nODu nI |
sUrya caMdrara tEja nanadayya
guDAkESayya | anna pacana nannadayya || 6 ||
SlOka
nAnE uttama manasu ennalli mADO
j~jAna aj~jAna pELuve tiLidu nODO
j~jAna durlaBa avara BaktigaLaMte
nAnu koDuvenu Palava manasu baMdaMte ||
pada
smaraNe mADuta dEha biDuvarO
nanna paDevarO | balu Bakti mADuvarO |
anaMta cEtana suLivenu
hari sulaBanu | matte jananavillavage |
enna Baktarigilla nASavu
svargadASavu | biTTu caraNa Bakutiya || 7 ||
SlOka
kRuShNa tOrisu ninna viBUti rUpa |
iShTa pUrtiyAgalo enage SrIpa |
rAma nAnayya rAjara guMpinalli
sOma nAnayya tAraka maMDaladallI ||
pada
akSharadoLage akAranu guNasAranu |
pakShigaLali nAnu garuDanu | sakala jAtigaLalli
SrEShTatanadali | enna rUpa tiLiyalli |
tOrisO SrI kRuShNa ninna rUpa |
nAnA rUpa | arjuna nODO rUpa |
kaMDanu tannanu sahitadi |
hari dEhadi | brahmAMDagaLalli || 8 ||
SlOka
kShara akShara eraDakkU uttamanu nAnu |
GOra narakakke lOBa kAmanu nAnu |
sAra dAnavu sajjanara hastadalli
BUri dakShiNe nIDO satpAtraralli ||
pada
sarva dAnadakiMta enaBakti
kELo BUSakti | mADayya virakti |
kRuShNa haraNavAytu ninniMda
mOha enniMda | bahu suvAkyadiMda |
kRuShNa BImAnujara saMvAda
maha suKaprada | dhRutarAShTra kELida |
ballenu vyAsara dayadiMda |
manasiniMda | kRuShNa nallE jayaveMda || 9 ||
|| SrIvyAsarAyaviracita BagavadgItAsAravu
samAptavAyitu ||
Leave a Reply