Composer : Shri Vijayadasaru
ವರಗಳನು ಕೊಡುವುದು ವಾಸುಕಿಯ ಪ್ರಿಯಾ |
ಕರುಣದಿಂದಲಿ ಒಲಿದು ಕಂಡ ಮಾತುರದಲಿ [ಪ]
ಇಂದ್ರಸಮಾನ ದೇವತೆಯೆ ರತಿಪತಿಯೇ |
ಇಂದಿರೇಶನ ನಿಜಕುಮಾರ ಮಾರ ||
ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ |
ಬಂಧುವೇ ಅಹಂಕಾರ ಪ್ರಾಣಗಿಂದಧಿಕನೆ [೧]
ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ |
ಮನದಲ್ಲಿ ಪುಟ್ಟಿಸೆ ಚತುರ ಜನರ ||
ಮುನಿಗಳೊಳಗೆ ಸನತ್ಕುಮಾರನಾಗಿ |
ಜನಿಸಿ ಯೋಗ ಮಾರ್ಗದಲ್ಲಿ ಚರಿಸಿದ ಕಾಮಾ [೨]
ತಾರಕಾಸುರನೆಂಬ ಬಹು ದುರುಳತನದಲ್ಲಿ |
ಗಾರುಮಾಡುತ್ತಿರಲು ಸುರಗಣವನು ||
ಗೌರಿ ಮಹೇಶ್ವರರಿಗೆ ಮಗನಾಗಿ ಪುಟ್ಟಿ |
ಧಾರುಣಿಯೊಳಗೆ ಸ್ಕಂದನೆನಿಸಿದೆ [೩]
ರುಕ್ಮಿಣಿಯಲಿ ಜನಿಸಿ ಮತ್ಸ್ಯ ಉದರದಲಿ |
ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು ||
ರಕ್ಕಸ ಶಂಬರನೊಡನೆ ಕಾದು ಗೆದ್ದು ಮರಳಿ |
ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲಿ [೪]
ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ |
ಮನೋ ವೈರಾಗ್ಯ ಚಕ್ರಾಭಿಮಾನಿ ||
ಎನಗೊಲಿದ ವಿಜಯವಿಠ್ಠಲರೇಯನಂಘ್ರಿ |
ಅರ್ಚನೆ ಮಾಡುವ ಸುಬ್ರಹ್ಮಣ್ಯ ಬಲು ಧನ್ಯ [೫]
varagaLanu koDuvudu vAsukiya priyA |
karuNadiMdali olidu kaMDa mAturadali [pa]
iMdrasamAna dEvateye ratipatiyE |
iMdirESana nijakumAra mAra ||
oMdu kAladali suMdaranenisikoMDirda |
baMdhuvE ahaMkAra prANagiMdadhikane [1]
vanaja saMBavanu sRuShTi sRujipagOsuga |
manadalli puTTise catura janara ||
munigaLoLage sanatkumAranAgi |
janisi yOga mArgadalli carisida kAmA [2]
tArakAsuraneMba bahu duruLatanadalli |
gArumADuttiralu suragaNavanu ||
gauri mahESvararige maganAgi puTTi |
dhAruNiyoLage skaMdaneniside [3]
rukmiNiyali janisi matsya udaradali |
pokku SiSuvAgi satiyiMda beLedu ||
rakkasa SaMbaranoDane kAdu geddu maraLi |
cakkane sAMbaneniside jAMbavatiyalli [4]
janapa daSarathanalli BaratanAgi puTTide |
manO vairAgya cakrABimAni ||
enagolida vijayaviThThalarEyanaMGri |
arcane mADuva subrahmaNya balu dhanya [5]
Leave a Reply