Composer : Shri Bhupati Vittala on Mahipati dasaru
ರಾಯರ ನೋಡಿರೈ ಮಹೀಪತಿ-
ರಾಯರ ಪಾಡಿರೈ || ಪ ||
ರಾಯರ ನೋಡುತ ಪಾಡುತ ಭಕುತಿಯ |
ಮಾಡಲು ಬೇಡಿದ ವರಗಳ ಕೊಡುವಾ || ೧ ||
ತಂದೆಯ ನೋಡಿರೈ ಮಹೀಪತಿ ಕಂದನ ಪಾಡಿರೈ |
ಕುಂದುಗಳೆಣಿಸದೆ ಬಂದ ಭಕುತ ಜನ |
ವೃಂದವ ಪೊರೆಯುವ ತಂದೆ ಮಹೀಪತಿ || ೨ ||
ಭೋಗಿಯ ನೋಡಿರೈ ತಾಮಸ ಯೋಗಿಯ ಪಾಡಿರೈ |
ತ್ಯಾಗರಾಜ ಭೂಪತಿವಿಠ್ಠಲ ಪ್ರಿಯ |
ಭೋಗಿ ಭೂಷಣಾಂಕ ವೈಷ್ಣವಾಗ್ರಣೀ || ೩ ||
rAyara nODirai mahIpati-
rAyara pADirai || pa ||
rAyara nODuta pADuta Bakutiya |
mADalu bEDida varagaLa koDuvA || 1 ||
taMdeya nODirai mahIpati kaMdana pADirai |
kuMdugaLeNisade baMda Bakuta jana |
vRuMdava poreyuva taMde mahIpati || 2 ||
BOgiya nODirai tAmasa yOgiya pADirai |
tyAgarAja BUpativiThThala priya |
BOgi BUShaNAMka vaiShNavAgraNI || 3 ||
Leave a Reply