Parvati patiye

Composer : Shri Muddumohana vittala dasaru on Rudra / Shiva

By Smt.Shubhalakshmi Rao

ಪಾರ್ವತೀ ಪತಿಯೇ ಎನ್ನ ಪಾಲಿಸುವುದು .. ಪ..
ದೂರ ನೋಡದೇ ಗುರುವ ಸಾರುವುದು ಸತತಾ .. ಅ. ಪ ..

ಭಜಕರ ಸರ್ವಕಾವನ ನಿಜ ದಾಸರೊಳ್ ಕೂಡಿಸಿ .
ಭಜನೆಯ ಮಾಡಿಸೋ ಬೇಗ ಭುಜಗ ಭೂಷಣನೆ ನೀನು ..1 ..

ನಂದಿವಾಹನನೆ ಎನ್ನಾ ಮಂದಮತಿಗಳ ಹರಿಸಿ .
ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ .. 2 ..

ದೂರ್ವಾಸ ಮುನಿಯೇ ಇಂದು ಗರ್ವವವ ಬಿಡಿಸಿ .
ಕಾರಣಕರ್ತ ಹರಿಯ ಶ್ರೀ ರಮಣನ ತೋರೋ .. 3 ..

ಭೂತನಾಥನೆ ನೀನು ಮಾತನು ಲಾಲಿಸುವುದು .
ದಾತಾನೆ ಸಲಹೋ ಎನ್ನಾ ಪಾತಕವನು ಹರಿಸಿ .. 4..

ಶುದ್ಧ ಭಕುತಿಯನು ಕೊಟ್ಟು ಸದ್-ವೈಷ್ಣವರ ಪ್ರೀಯನೆ .
ಮಧ್ವಾಂತರ್ಗತ ಮುದ್ದು-ಮೋಹನವಿಠ್ಠಲನ್ನ ತೋರೋ .. 5 ..


pArvatI patiyE enna pAlisuvudu || pa||
dUra nODadE guruva sAruvudu satatA || a. pa ||

Bajakara sarvakAvana nija dAsaroL kUDisi |
Bajaneya mADisO bEga Bujaga BUShaNane nInu ||1 ||

naMdivAhanane ennA maMdamatigaLa harisi |
kaMdugoraLane nInu AnaMdadiMdali kAyO || 2 ||

dUrvAsa muniyE iMdu garvavava biDisi |
kAraNakarta hariya SrI ramaNana tOrO || 3 ||

BUtanAthane nInu mAtanu lAlisuvudu |
dAtAne salahO ennA pAtakavanu harisi || 4||

Suddha Bakutiyanu koTTu sad-vaiShNavara prIyane |
madhvAMtargata muddu-mOhanaviThThalanna tOrO || 5 ||

Leave a Reply

Your email address will not be published. Required fields are marked *

You might also like

error: Content is protected !!