Composer : Shri Mahipati dasaru
ನೀನೆ ಎನಗಾಧಾರಿ ಶ್ರೀಹರಿ |
ನೀನೆ ಎನಗಾಧಾರಿ |ಪ|
ಸಕಲ ಸುಖವ ಬೀರುವ ಉದಾರಿ
ಭಕ್ತ ವತ್ಸಲ ಮುಕುಂದ ಮುರಾರಿ [೧]
ಅಂತರ್ಬಾಹ್ಯದಲೀಹ ಶ್ರೀ ನರಹರಿ
ಕಂತುಪಿತನೆ ಪೀತಾಂಬರಧಾರಿ [೨]
ಹಿತದಾಯಕ ನೀನೆವೆ ಪರೋಪರಿ
ಪತಿತಪಾವನ ಮಹಿಪತಿ ಸಹಕಾರಿ [೩]
nIne enagAdhAri SrIhari |
nIne enagAdhAri |pa|
sakala suKava bIruva udAri
Bakta vatsala mukuMda murAri [1]
aMtarbAhyadalIha shrI narahari
kaMtupitane pItAMbaradhAri [2]
hitadAyaka nIneve parOpari
patitapAvana mahipati sahakAri [3]
Leave a Reply