Composer : Shri Mahipati dasaru – Keshava nama
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ |
ಕ್ಲೇಶಪಾಶವು ಕತ್ತರಿಸಿ ದೋಷ ನಾಶವನು ಗೈಸಿ
ಪೋಷಿಸುವ ಕೇಶವ ನಿಮ್ಮ ನಾಮ 1
ನರಕ ಘೋರದ ಘಟವೆಂಬ ನರಜನ್ಮದುರ್ಘಟ
ತಾರಿಸುವ ನಾರಾಯಣ ನಿಮ್ಮ ನಾಮ 2
ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ
ಸದ್ಗೈಸುತಿಹ ಮಾಧವ ನಿಮ್ಮ ನಾಮ 3
ಗೋವಿಸಿಹ ವಿದ್ಯದ ಮಾಯ ಮೋಹವನಳಿಸಿ
ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4
ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ
ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5
ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ
ಪದವೀವ ಮಧುಸೂದನ ನಿಮ್ಮ ನಾಮ 6
ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ
ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7
ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ
ಜನ್ಮ ತಾರಿಸುವ ವಾಮನ ನಿಮ್ಮ ನಾಮ 8
ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ
ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9
ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು
ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10
ಪರಬ್ರಹ್ಮದೊಳು ಬೆರಿಸಿ ಪರಮ ಪಾತಕ ಹರಿಸಿ
ಪರಮಗತಿನೀವ ಪದ್ಮನಾಭ ನಿಮ್ಮ ನಾಮ 11
ದಾರಿದ್ರ್ಯ ದುರಿತ ವಿಧ್ವಂಸನಿಯ ಮಾಡಿ ಧರೆಯೊಳು
ದ್ಧರಿಸುವ ದಾಮೋದರ ನಿಮ್ಮ ನಾಮ 12
ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ
ಅಖಿಳದೊಳು ಸಂಕುರುಷಣ ನಿಮ್ಮ ನಾಮ 13
ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ
ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14
ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ
ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15
ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ
ಅನುಕೂಲಾಗುವ ಅನಿರುದ್ಧ ನಿಮ್ಮ ನಾಮ 16
ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ
ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17
ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ
ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18
ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ
ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19
ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ
ಅಚಲಪದವೀವ ಅಚ್ಯುತ ನಿಮ್ಮ ನಾಮ 20
ಜನನ ಮರಣವನಳಿಸಿ ತನುಮದೊಳು ಬೆರಿಸಿ
ಜನುಮ ಹರಿಸುವ ಜನಾರ್ದನ ನಿಮ್ಮ ನಾಮ 21
ಉಪಮೆಯ ರಹಿತ ವಸ್ತುವುಪಾಯದಲಿ ತೋರಿ
ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ 22
ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ
ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23
ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ
ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24
ವೇದ ವಿಂಶತಿ ನಾಮ ಸಾರ ಸಂಧ್ಯಾಯನದಿ
ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
Baya nivAraNavu SrIguru divyanAma nimma nAma ||
klESapASavu kattarisi dOSha nASavanu gaisi
pOShisuva kESava nimma nAma 1
naraka GOrada GaTaveMba narajanmadurGaTa
tArisuva nArAyaNa nimma nAma 2
madamatsarava jarisi BEdABEdavu harisi
sadgaisutiha mAdhava nimma nAma 3
gOvisiha vidyada mAya mOhavanaLisi
Bava hiMgisuva gOviMda nimma nAma 4
iShTArthagaLa koTTu kaShTArtha pariharisi
dRuShTAMtadali horeva viShNu nimma nAma 5
modalu mUvidhiyagaLu jarisi sadamala puNya
padavIva madhusUdana nimma nAma 6
trividhAdhyAtma sthitigatiya Iva SAstragaLanarisi
BAvaBaktIva trivikrama nimma nAma 7
varmadharmavanarisi karmapASava harisi
janma tArisuva vAmana nimma nAma 8
SrIkaravanittu sirisakala sauBAgyadali
sRuShTiyoLu horeva SrIdhara nimma nAma 9
harisi saMdEha saMkalpa bAdheyagaLu
haruSha gatinIva hRuShIkESa nimma nAma 10
parabrahmadoLu berisi parama pAtaka harisi
paramagatinIva padmanABa nimma nAma 11
dAridrya durita vidhvaMsaniya mADi dhareyoLu
ddharisuva dAmOdara nimma nAma 12
sakala padavitta suKasAdhanava tOrutihya
aKiLadoLu saMkuruShaNa nimma nAma 13
vAsaneyu pUrisuta BAShe pAlisutiha
lEsAgi SrIvAsudEva nimma nAma 14
prANapriyavAgi prasannavAguva pUrNa
pratyakShavidu pradyumna nimma nAma 15
anumAna pariharisi anuBavAmRuta surisi
anukUlAguva aniruddha nimma nAma 16
pUrvakarmava harisi pUrNakaLeyoLu beresi
puNyapadavIva puruShOttama nimma nAma 17
adhyAtma suKavarisi siddhAMtavanu tOri
adhyakShavAguvAdhOkShaja nimma nAma 18
narajanmavanu harisi hariBaktiyoLu beresi
aruvu kurhuvhiDida narasiMha nimma nAma 19
arcaneyu prArthaneyu paramapUjeyanarisi
acalapadavIva acyuta nimma nAma 20
janana maraNavanaLisi tanumadoLu berisi
januma harisuva janArdana nimma nAma 21
upameya rahita vastuvupAyadali tOri
kRupeyiMda horeva upEMdra nimma nAma 22
harisi ahaMBAva arisi anuBava pUrNa
surisuva suKa SrIhari nimma nAma 23
karakamalaviTTu Siradali sadgaisutiha
karuNALu mUruti SrIkRuShNa nimma nAma 24
vEda viMSati nAma sAra saMdhyAyanadi
mahipatiya horeva SrIguru nimma nAma 25
Leave a Reply