By Shri Bannanje Govindacharya
ಬಣ್ಣ ಪುತ್ಥಳಿಚಿನ್ನ ಹರಿಯವಳ ಮನದನ್ನ
ಬಂಗಾರ-ಬೆಳ್ಳಿ ಹಾರ ಕೊರಳಲ್ಲಿ |
ಚಂದ್ರನೊಲು ಚಂದ ಸೊಗದಂದ ಲಕುಮಿ
ಜಾತವೇದನೆ ತಾರ ನನಗವಳ ಹರಕೆ [೧]
ಜಾತವೇದನೆ ತಾರ ನನಗವಳ ಹರಕೆಯನು
ಕರಗಿ ಕಣ್ಮರೆಯಾಗದಂಥ ಸಿರಿಯ |
ಅವಳೊಲಿಯೆ ಪಡೆದೇನು ನಾನು ಬಂಗಾರವನು
ಪಡೆದೇನು ಹಸು ಕುದುರೆ ಆಳುಗಳನು [೨]
ಕುದುರೆ ಮುಂಚೂಣಿಯಲಿ ತೇರುಂಟು ನಡುವೆ ಮ-
ದ್ದಾನೆಗಳ ಗೀಳಿಂದ ಗೆಲುವು ಗೊಂಡವಳು |
ಸಿರಿದೇವಿಯನು ಕರೆವೆ ನನ್ನನಾ ಸಿರಿದೇವಿ
ವಾತ್ಸಲ್ಯ-ದೆರಕದಲಿ ಪೊರೆಯುತಿರಲಿ [೩]
ಕಂಚುನಗೆಯವಳು ಬಂಗಾರದಾ ಸುತ್ತು ಪಾಗಾರದವಳು
ಕರುಣೆಯಿಂ-ದೆಸೆವವಳು ತಣಿದವಳು ತಣಿಸುವವಳು |
ತಾವರೆಯೆ ನೆಲೆದಾಣ ತಾವರೆಯದೇ ಬಣ್ಣ
ಆ ಸಿರಿಯ ಕರುಣೆಯನು ಕರೆವೆನಿತ್ತ [೪]
ಚಂದಿರನ ತಂಪು, ಹಿರಿಹೊಳಪು, ಜಸದಿಂದ ಮೆರೆಯುವವಳು
ಸುರರು ಮಣಿದವಳು ಜಗದಿ ಕೊಡುಗೈಯವಳು ಸಿರಿದೇವಿಯು |
ಶರಣೆನುವೆ ಹರಿಯ ಜತೆಗಾತಿ ತಾವರೆಯ ತೊಟ್ಟವಳನು
ತೊಡೆದು ಹೋಗಲಿ ನನ್ನ ಬಡತನ ನಿನ್ನನೇ ಪೊಡಮಡುವೆ [೫]
ಮೂಡಿಬಹ ಸೂರ್ಯನೊಲು ಹೊಳೆವವಳೆ ನಿನ್ನ ತಪಸಿನಿಂದ
ಹುಟ್ಟಿತಲ ನಿನಗೆ ಮೆಚ್ಚಾದ ಹೂಬಿಡದ ಬಿಲ್ವದ ಮರ |
ನಿನ್ನ ತಪದ ಬಲದಿಂದ ನೀಗಿಸಲಿ ಅದರ ಹಣ್ಣುಗಳು
ನನ್ನೊಳಗೆ ಹೊರಗೆ ಗಿಡಿದಿರುವ ಮುಸುಕು-ಬಡತನಗಳನ್ನು [೬]
ದೇವದೇವನ ಗೆಳೆಯ ನನ್ನ ಬಳಿ ಬಂದಿರಲಿ
ಬರಲಿ ಚಿಂತಾಮಣಿಯ ಜತೆಗೆ ಕೀರ್ತಿ |
ಹುಟ್ಟಿಬಂದಿರುವೆನೀ ಪುಣ್ಯ ಜನಪದದಲ್ಲಿ
ಜಸವನೇಳಿಗೆಯನ್ನು ಕರುಣಿಸಲಿ ನನಗೆ [೭]
ಹಸಿವು ಬಾಯಾರಿಕೆಯ ಕೊಳೆಮೈಯ ಹಿರಿಯಕ್ಕ
ಬಡತನದ ಹೊಲೆಯನ್ನು ತೊಲಗಿಸುವೆ ನಾನು |
ಕೆಳಗೆಳೆದು ಬೀಳಿಸುವ ಹೊರೆಯನ್ನು ಕೊರೆಯನ್ನು
ಎಲ್ಲವನು ತಳ್ಳಿಬಿಡು ನನ್ನ ಮನೆಯಿಂದ [೮]
ಮಣ್ಣ ಕಂಪಿನ ಗುರುತು, ಯಾರ ಅಂಕೆಗು ಹೊರತು
ನಿತ್ಯ ಸದ್ಗುಣಭರಿತೆ ಸೃಷ್ಟಿಚರಿತೆ |
ಎಲ್ಲ ಬಗೆ ಜೀವಜಾತಕ್ಕು ಇವಳೊಡತಿ
ಅಂಥ ಸಿರಿಕರುಣೆಯನು ಕರೆವೆನಿತ್ತ [೯]
ಮನದ ಬಯಕೆಯ ಕರೆಯ ಮತ್ತೆ ಆತ್ಮದ ಮೊರೆಯ
ಪಡೆದೇವು ಮಾತಿನಲಿ ನಿಜದ ಕೆಚ್ಚು |
ಹುಲುಸಾದ ಹಸುಹಯನು ಹಲಬಗೆಯ ತಿನಿಸುಣಿಸು
ಸಿರಿದೇವಿ ಕರುಣಿಸಲಿ ಜಸದ ಜತೆಗೆ [೧೦]
ಅವಳು ಹೆತ್ತಿರುವಂಥ ಕಂದನಲ ಕರ್ದಮನು
ಬಾರ ಬಾ ಕರ್ದಮನೆ ನನ್ನ ಬಳಿ ನೆಲೆಸು |
ಇರಗೊಳಿಸು ಸಿರಿಯನ್ನು ನನ್ನ ಸಂತತಿಯಲ್ಲಿ
ತಾವರೆಯ ಮಾಲೆಯನು ತೊಟ್ಟ ತಾಯನ್ನು [೧೧]
ನೀರಿನಧಿ ದೇವತೆಯು ರಸವಂತಿಕೆಯ ತರಲಿ
ನೆಲೆಸೆನ್ನ ಮನೆಯಲ್ಲಿ ಚಿಕ್ಲೀತನೆ |
ಮತ್ತೆ ನಿನ್ನಬ್ಬೆಯನು ಸಿರಿದೇವಿಯನು ಕೂಡ
ನೆಲೆಗೊಳಿಸು ನಮ್ಮ ಮನೆಮನೆಗಳಲ್ಲಿ [೧೨]
ಆನೆಸೊಂಡಿಲ ಸೇವೆ ಕೊಂಡವಳು ಕರುಣಾಳು
ನಸುಗೆಂಪು ತುಂಬುಮೈ ತಾವರೆಯ ಹಾರ |
ಚಂದ್ರನಲಿ ನೆಲೆಸಿಹಳು ಸುಖದ ಸುಗ್ಗಿಯು ಲಕುಮಿ
ಜಾತವೇದನೆ ತಾರ ನನಗವಳ ಹರಕೆ [೧೩]
ಧರ್ಮದಂಡವ ಹಿಡಿದ ತೆಳುಮೈಯ ಕರುಣಾಳು
ಮಿಸುನಿಬಣ್ಣದ ಮೈಗೆ ಬಂಗಾರ ಹಾರ |
ಸೂರ್ಯನಲಿ ನೆಲೆಸಿಹಳು ಸುಖದ ಸುಗ್ಗಿಯು ಲಕುಮಿ
ಜಾತವೇದನೆ ತಾರ ನನಗವಳ ಹರಕೆ [೧೪]
ಜಾತವೇದನೆ ತಾರ ನನಗವಳ ಹರಕೆಯನು
ಕರಗಿ ಕಣ್ಮರೆಯಾಗದಂಥ ಸಿರಿಯನ್ನು
ಅವಳೊಲಿಯೆ ಪಡೆದೇನು ಹೇರು ಬಂಗಾರವನು
ಹಯನುಗಳ ತೊತ್ತುಗಳ ಕುದುರೆಗಳನಾಳುಗಳ ನಾನು [೧೫]
baNNa putthaLicinna hariyavaLa manadanna
baMgAra-beLLi hAra koraLalli |
caMdranolu caMda sogadaMda lakumi
jAtavEdane tAra nanagavaLa harake [1]
jAtavEdane tAra nanagavaLa harakeyanu
karagi kaNmareyAgadaMtha siriya |
avaLoliye paDedEnu nAnu baMgAravanu
paDedEnu hasu kudure ALugaLanu [2]
kudure muMcUNiyali tEruMTu naDuve ma-
ddAnegaLa gILiMda geluvu goMDavaLu |
siridEviyanu kareve nannanA siridEvi
vAtsalya-derakadali poreyutirali [3]
kaMcunageyavaLu baMgAradA suttu pAgAradavaLu
karuNeyiM-desevavaLu taNidavaLu taNisuvavaLu |
tAvareye neledANa tAvareyadE baNNa
A siriya karuNeyanu karevenitta [4]
caMdirana taMpu, hirihoLapu, jasadiMda mereyuvavaLu
suraru maNidavaLu jagadi koDugaiyavaLu siridEviyu |
SaraNenuve hariya jategAti tAvareya toTTavaLanu
toDedu hOgali nanna baDatana ninnanE poDamaDuve [5]
mUDibaha sUryanolu hoLevavaLe ninna tapasiniMda
huTTitala ninage meccAda hUbiDada bilvada mara |
ninna tapada baladiMda nIgisali adara haNNugaLu
nannoLage horage giDidiruva musuku-baDatanagaLannu [6]
dEvadEvana geLeya nanna baLi baMdirali
barali ciMtAmaNiya jatege kIrti |
huTTibaMdiruvenI puNya janapadadalli
jasavanELigeyannu karuNisali nanage [7]
hasivu bAyArikeya koLemaiya hiriyakka
baDatanada holeyannu tolagisuve nAnu |
keLageLedu bILisuva horeyannu koreyannu
ellavanu taLLibiDu nanna maneyiMda [8]
maNNa kaMpina gurutu, yAra aMkegu horatu
nitya sadguNaBarite sRuShTicarite |
ella bage jIvajAtakku ivaLoDati
aMtha sirikaruNeyanu karevenitta [9]
manada bayakeya kareya matte Atmada moreya
paDedEvu mAtinali nijada keccu |
hulusAda hasuhayanu halabageya tinisuNisu
siridEvi karuNisali jasada jatege [10]
avaLu hettiruvaMtha kaMdanala kardamanu
bAra bA kardamane nanna baLi nelesu |
iragoLisu siriyannu nanna saMtatiyalli
tAvareya mAleyanu toTTa tAyannu [11]
nIrinadhi dEvateyu rasavaMtikeya tarali
nelesenna maneyalli cikleetane |
matte ninnabbeyanu siridEviyanu kUDa
nelegoLisu namma manemanegaLalli [12]
AnesoMDila sEve koMDavaLu karuNALu
nasugeMpu tuMbumai tAvareya hAra |
caMdranali nelesihaLu suKada suggiyu lakumi
jAtavEdane tAra nanagavaLa harake [13]
dharmadaMDava hiDida teLumaiya karuNALu
misunibaNNada maige baMgAra hAra |
sUryanali nelesihaLu suKada suggiyu lakumi
jAtavEdane tAra nanagavaLa harake [14]
jAtavEdane tAra nanagavaLa harakeyanu
karagi kaNmareyAgadaMtha siriyannu
avaLoliye paDedEnu hEru baMgAravanu
hayanugaLa tottugaLa kuduregaLanALugaLa nAnu [15]
Leave a Reply