Composer: Shri Bannanje Govindacharya
ತಾಳ: ಖಂಡ ಛಾಪು
ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ
ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ ||
ತಾಳ: ಆದಿತಾಳ
ಜಗದೊಡೆಯ ಬಂದ ಉಡುಪಿಯಲಿ ನಿಂದ
ಪಡುಗಡಲ ದಾರಿಯಿಂದ ಮಿಗಿಲುಂಟೆ ಚೆಂದ
ಕಣ್ಗಳಾನಂದ ಆನಂದಕಂದನಿಂದ
ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ ||೧ ||
ಕಡಗೋಲು ಕೈಯ್ಯ ಕಡುನೀಲಿ ಮೈಯ್ಯ
ಈ ಬಾಲ ರೂಪ ಕಂಡು ಒಡಮಡದ ಶಿರವು
ಜೋಡಿಸದ ಕರವು ಬರಿ ಹುಲ್ಲು ಮಣ್ಣು ದುಂಡು
ಆ ಮುಗುಳುನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ
ಶ್ರೀಮಧ್ವಗೊಲಿದ ಕೃಷ್ಣನನಿಗೆಲಿದ ವೆಗ್ಗಳದ ನಾಡು ಉಡುಪಿ ||೨ ||
ಪಡುಗಡಲ ತೀರದಿಂದೆದ್ದು ಬಾರ
ಕಡಗೋಲು ಬೆತ್ತ ಹಿಡಿದು ಬಿಡುಗಡೆಯ ದಾರಿ
ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು
ಆನಂದತೀರ್ಥರೀಕರೆಗೆ ಪಾರ್ಥಸಾರಥಿಯು ಕರಗಿ ಬಂದು
ಆ ನಿಂತ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು ||೩||
————————————————————————
tALa: KaMDa CApu uDupiya kaMDIrA
uDupiya kRuShNana kaMDIrA
kRuShNana kaMDIrA
kRuShNana uDupiya kaMDIrA ||
tALa: AditALa
jagadoDeya baMda uDupiyali niMda
paDugaDala dAriyiMda migiluMTe ceMda kaNgaLAnaMda
AnaMdakaMdaniMda dvArakeya vAsa O hRuShIkESa
sAkenisitEnO IShA
vAriyali baMde dAriyali niMde nI dATi dESa dESa ||1
kaDagOlu kaiyya kaDuneeli maiyya I bAla rUpa kaMDu
oDamaDada Siravu jODisada karavu bari hullu maNNu duMDu
A muguLunagege A niMta bagege maruLAdaLaMte gOpi
SrImadhvagolida kRuShNananigelida veggaLada nADu uDupi ||2
paDugaDala tIradiMdeddu bAra kaDagOlu betta hiDidu
biDugaDeya dAri Baktarige tOri nammedeya beNNe kaDedu
AnaMdatIrtharIkarege pArthasArathiyu karagi baMdu
A niMta kallinoLagiMda illi vaikuMThavannE taMdu ||3
Leave a Reply