Jagada iravu

mountain, peak, clouds-8433234.jpg

Dwadasha Stotra – Shri Stuti – Kannada anuvada by Shri Bannanje Govindacharya

By Smt.Shubhalakshmi Rao

ಜಗದ ಇರವು-ಮೇಣಳಿವು- ಹುಟ್ಟು-ಐಸಿರಿಯ ಹಿರಿಯ ಯೋಗ

ಬಾಳು-ತಿಳಿವು-ನಿಯಮನವು ಅಂತೆ ಅಜ್ಞಾನ-ಬಂಧ-ಮೋಕ್ಷ

ಯಾವ ರಮೆಯ ಕಡೆಗಣ್ಣ ನೋಟಕೀಯೆಲ್ಲ ನಡೆಯುತಿಹುದೋ

ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೧]

ಬ್ರಹ್ಮ-ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ

ಸುರರ ಗುಂಪು ಈ ಜಗದ ವಿಜಯವನು ತಿಳಿವಿಗೆಟುಕದಂಥ

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ

ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ  [೨]

ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳು

ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ-ಮಂಗಲವನು

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ

ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [ ೩]

ಯಾರನಾಶ್ರಯಿಸೆ ಬಾಳ ದುಗುಡ ನಮ್ಮೆಡೆಗೆ ಬರದೋ ಅಂಥ

ಆರು ವೈರಿಗಳ ಗೆದ್ದ ಮುನಿಗಳು ಹರಿಯ ಮಹಿಮೆಯನ್ನು

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೆನೆಯುತಿಹರೋ

ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೪]

ಶೇಷ-ಗರುಡ-ಗೌರೀಶ-ಇಂದ್ರ-ಮನು ಎಂಬ ತುಂಬ ಬಗೆಯ

ಶೃಷ್ಟಿಯಚ್ಚರಿಯ ಪಡೆದ ವಿಶ್ವನು ಬ್ರಹ್ಮದೇವ ತಾನು

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ರಚಿಸುತಿಹನೋ

ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೫]

ಇಂದ್ರ-ಚಂದ್ರಮರು ಸೂರ್ಯನಂತಕಂ ಇಂಥ ಎಲ್ಲ ಜಗವ

ಪ್ರಳಯ ಕಾಲದಲಿ ಶಿವನು ಸಂಹರಿಸಿ ದಿವ್ಯ ಶಕ್ತಿ ಪಡೆದು

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಕುಣಿಯಬಹನೋ

ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೬]

ಶಂಕರಾದಿವಂದಿತನು ಶೇಷ ತಾನಿತರ ಸುರರಿಗಿರದ

ಹರಿಯ ಪಾದಪಂಕಜಕೆ ಪೀಠವಹ ಹಿರಿಯ ಭಾಗ್ಯವನ್ನು

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಪಡೆದುಬಹನೋ

ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ ೭

ಅಮಿತವೇಗ ನಡುಗಿಸುವ ಬಲವ ಪೌರುಷದ ಗರುಡದೇವ

ಸುರರ ಕಲ್ಪನೆಗು ನಿಲುಕದಂಥ ಶ್ರೀಹರಿಯ ಹೊರೆವ ಪುಣ್ಯಂ

ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಪಡೆದುಬಹನೋ

ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೮]

ಮಧ್ವಮುನಿಯ ಮುಖಕಮಲದಿಂದ ಹೊರಹೊಮ್ಮಿದಂಥ ಹಾಡು

ಹಿರಿಯ ಅರ್ಥವನು ಸಾರುತಿದೆ, ಹರಿ-ರಮೆಯರಚ್ಚುಮೆಚ್ಚು

ಭಕ್ತಿಯಿಂದ ಭಗವಂತನನ್ನು ನೆನೆದಿದನು ಹಾಡುವವನು

ಹರಿಯ-ರಮೆಯ ಕೃಪೆಯಿಂದ ಹೊಂದುವನು ತನ್ನ ಬಯಕೆಗಳನು [೯]

ಶ್ರೀ ಕೃಷ್ಣಾರ್ಪಣಮಸ್ತು ||


jagada iravu-mENaLivu- huTTu-aisiriya hiriya yOga

bALu-tiLivu-niyamanavu aMte aj~jAna-baMdha-mOkSha

yAva rameya kaDegaNNa nOTakIyella naDeyutihudO

aMthavaLanu tanna melunOTadiMda kApiDuva harige namanaM 1

brahma-rudra-dEvEMdra-sUrya-yamadharma-chaMdrarAdi

surara guMpu ee jagada vijayavanu tiLivigeTukadaMtha

yAva rameya kaDegaNNa nOTadAshrayadi nIDutiharO

aMthavaLanU tanna melunOTadiMda kApiDuva harige namanaM  2

dharmanirata sajjanara poojeyanu koLuva dEvategaLu

satyadarivu-dharmArtha-kAma-muMtAda-maMgalavanu

yAva rameya kaDegaNNa nOTadAshrayadi nIDutiharO

aMthavaLanU tanna melunOTadiMda kApiDuva harige namanaM 3

yAranAshrayise bALa duguDa nammeDege baradO aMtha

Aru vairigaLa gedda munigaLu hariya mahimeyannu

yAva rameya kaDegaNNa nOTadAshrayadi neneyutiharO

aMthavaLanu tanna melunOTadiMda kApiDuva harige namanaM 4

shESha-garuDa-gourIsha-iMdra-manu eMba tuMba bageya

shRuShTiyacchariya paDeda vishwanu brahmadEva tAnu

yAva rameya kaDegaNNa nOTadAshrayadi rachisutihanO

aMthavaLanu tanna melunOTadiMda kApiDuva harige namanaM 5

iMdra-chaMdramaru sUryanaMtakaM iMtha ella jagava

praLaya kAladali shivanu saMharisi divya shakti paDedu

yAva rameya kaDegaNNa nOTadAshrayadi kuNiyabahanO

aMthavaLanu tanna melunOTadiMda kApiDuva harige namanaM 6

shaMkarAdivaMditanu shESha tAnitara surarigirada

hariya pAdapaMkajake pIThavaha hiriya bhAgyavannu

yAva rameya kaDegaNNa nOTadAshrayadi paDedubahanO

aMthavaLanu tanna melunOTadiMda kApiDuva harige namanaM 7

amitavEga naDugisuva balava pouruShada garuDadEva

surara kalpanegu nilukadaMtha shreehariya horeva puNyaM

yAva rameya kaDegaNNa nOTadAshrayadi paDedubahanO

aMthavaLanu tanna melunOTadiMda kApiDuva harige namanaM 8

madhvamuniya mukhakamaladiMda horahommidaMtha hADu

hiriya arthavanu sArutide, hari-rameyaracchumecchu

bhaktiyiMda bhagavaMtanannu nenedidanu hADuvavanu

hariya-rameya kRupeyiMda hoMduvanu tanna bayakegaLanu 9

Leave a Reply

Your email address will not be published. Required fields are marked *

You might also like

error: Content is protected !!