Srinivasa

  • Sharanu Sharanu parama

    Composer : Shri Prasannavenkata dasaru ಶರಣು ಶರಣು ಹೇ ಪರಮ ಪುರುಷಶರಣು ಭಯಂಕರ ಖಂಡನಶರಣು ಸಿರಿ ವಿಧಿ ಮರುತ ಪೂಜಿತಶರಣು ವೆಂಕಟನಾಯಕ [ಪ.] ಭಾಸಿತ ತಟಿತ ಮಕರ ಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷ ಸ್ಥಿತಿಲಯ ಶೀಲನೆತೋಷಮಂದ ಸುಹಾಸವದನನೆಶೇಷಗಿರೀವಾಶ ನಮೋ ಹರೆ [೧] ಶಂಖ ಚಕ್ರಗದೆ ಪದುಮ ವರಾಕಂಕಣಕರ ರಾಜಿತಕುಂಕುಮ ಮೃಗಮದ ತಿಲಕಧರಾತಂಕ ಕುಂಭಿ ಮೃಗಾಧಿಪಕಿಂಕರಾನತ ರಕ್ಷಕ ರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ [೨] ಜನನ ಮೃತ್ಯುವಿದೂರ ಅಚ್ಯುತಮುನಿಮನಾಲಯ ಮಾಧವಕನಕನೇತ್ರವಿದಾರಿ ಸ್ತೌತ್ಯಘನ ವಿಮಲಗುಣ…

  • Enna bittu neenu

    Composer : Shri Purandara dasaru ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿಮನವೆಂಬೊ ಹಸೆ ಮಂಚ ,ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,ಸನಕಾದಿ ವಂದ್ಯ ನೀ ಬೇಗ ಬಾರೋ |೧| ಪಂಚರಿವರು ಯಾವಾಗಲೂ,ಹೊಂಚ್ಹಾಕಿ ನೋಡುತಾರೆಕೊಂಚಗಾರರು ಆರು ಮಂದಿ ಅವರು,ಹಿಂಚು ಮುಂಚಿಲ್ಲದೆ ಎಳೆಯುತಾರೆ |೨| ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ,ಇನ್ನಾದರು ನೀ ಎನ್ನ ಕಾಯೊಘನ್ನ ಮಹಿಮ ಶ್ರೀ ಪುರಂದರವಿಠಲ,ಮನ್ನಿಸಿ ಮಮತೆ ಎನ್ನಲ್ಲಿ ತೋರೊ |೩| enna biTTu nInu agaladiro SrInivAsa…

  • Mangala snanava maadelo

    Composer : Shri Anantadreesharu ಮಂಗಳ ಸ್ನಾನವ ಮಾಡೇಳೋಜಗನ್ ಮಂಗಳದಾಯಕ ಹರಿಯೇ ದಯಾಳೋ [ಪ] ಸಣ್ಣ ನಾಮವ ಬರೆದಿಟ್ಟು ಬಹುಬಣ್ಣದ ಕುಂಕುಮ ಮಧ್ಯದಲಿಟ್ಟುಸಣ್ಣಿಟ್ಟು ಕಸ್ತೂರಿ ಬೊಟ್ಟುಮಾಡು ಪುಣ್ಯಾಹವಾಚನ ಪೀತಾಂಬರುಟ್ಟು [೧] ದೇವರಿಗೊಂದನೆ ಮಾಡುಕುಲ ದೇವತೆ ಸ್ಥಾಪನೆ ಮನೆಯಲ್ಲಿ ಮಾಡುಕೇವಲ ಲೌಕಿಕ ನೋಡುಭೂ ದೇವರಿಗೆ ವಂದಿಸಿ ವರಗಳ ಬೇಡು [೨] ನಾನಾ ದೇಶದಿ ಬಂದ ಜನರು ನಿನ್ನಆನಂದೋತ್ಸವವಿದು ನೋಡೇವೆಂಬರುಸ್ನಾನ ಮಾಡಿಸುವ ಸೇವಕರುಅಚ್ಯುತಾನಂತಾದ್ರೀಶನೆ ಸಿದ್ಧರಾಗಿಹರು [೩] maMgaLa snAnava mADELOjagan maMgaLadAyaka hariyE dayALO [pa] saNNa nAmava barediTTu…

error: Content is protected !!