Purandara dasaru

  • Indu ninna moreyahokke

    Composer : Shri Purandara dasaru ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆಎಂದಿಗಾದರೆಮ್ಮ ಕಾಯೊ ಶ್ರೀನಿವಾಸನೆ ||ಪ|| ಶೇಷಗಿರಿಯವಾಸ ಶ್ರೀಶ ದೋಷರಹಿತನೆಏಸು ದಿನಕು ನಿನ್ನ ಪಾದ ದಾಸನು ನಾನೆಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||೧|| ಕಮಲನಯನ ಕಾಮಜನಕ ಕರುಣವಾರಿಧೇರಮೆಯನಾಳ್ವ ಕಮಲನಾಭ ಹೇ ದಯಾನಿಧೇಯಮನ ಪುರದಿ ಶಿಕ್ಷಿಸದಿರೊ ಪಾರ್ಥಸಾರಥೇ ||೨|| ಉರಗಶಯನ ಸುರರಿಗೊಡೆಯ ಸಿರಿಯ ರಮಣನೆಶರಣಪಾಲ ಬಿರುದು ತೋರಿ ಪೊರೆವ ದೇವನೆಕರುಣಿಸೆಮಗೆ ಮುಕುತಿಯನ್ನು ಪುರಂದರವಿಠಲನೆ ||೩|| iMdu ninna moreya hokke veMkaTESaneeMdigAdaremma kAyo SrInivAsane ||pa|| SEShagiriyavAsa…

  • Enna bittu neenu

    Composer : Shri Purandara dasaru ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿಮನವೆಂಬೊ ಹಸೆ ಮಂಚ ,ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,ಸನಕಾದಿ ವಂದ್ಯ ನೀ ಬೇಗ ಬಾರೋ |೧| ಪಂಚರಿವರು ಯಾವಾಗಲೂ,ಹೊಂಚ್ಹಾಕಿ ನೋಡುತಾರೆಕೊಂಚಗಾರರು ಆರು ಮಂದಿ ಅವರು,ಹಿಂಚು ಮುಂಚಿಲ್ಲದೆ ಎಳೆಯುತಾರೆ |೨| ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ,ಇನ್ನಾದರು ನೀ ಎನ್ನ ಕಾಯೊಘನ್ನ ಮಹಿಮ ಶ್ರೀ ಪುರಂದರವಿಠಲ,ಮನ್ನಿಸಿ ಮಮತೆ ಎನ್ನಲ್ಲಿ ತೋರೊ |೩| enna biTTu nInu agaladiro SrInivAsa…

  • Gangadi sakala

    Composer : Shri Purandara dasaru ಗಂಗಾದಿ ಸಕಲ ತೀರ್ಥಂಗಳ ಫಲವಿದುಹರಿಯ ನಾಮಾ |ಹಿಂಗದೆ ಜನರಿಗೆ ಮಂಗಳ ಕರವಿದುಹರಿಯನಾಮಾ ||ಪ|| ವೇದಶಾಸ್ತ್ರಗಳ ಓದಲರಿಯದವಗೆಹರಿಯನಾಮಆದಿ ಪುರುಷನ ಪೂಜಿಸದವಗೆಹರಿಯನಾಮ ||೧|| ಸಾಧಿಸಬೇಕು ಮೋಕ್ಷವೆಂಬುವರಿಗೆಹರಿಯ ನಾಮಶೋಧಿಸಿ ಇಟ್ಟ ,ಚಿನ್ನದ ಗಟ್ಟಿ ಕಾಣಿರೋಹರಿಯ ನಾಮಾ.. ||೨|| ಸ್ನಾನಸಂಧ್ಯಾವಂದನೆ ಮಾಡದವಗೆಹರಿಯ ನಾಮಜ್ಞಾನವು ಇಲ್ಲದ ಮೂಢಾತ್ಮ ಜನರಿಗೆಹರಿಯ ನಾಮ ||೩|| ದಾನಧರ್ಮಕನುಕೂಲ-ವಿಲ್ಲದವಗೆಹರಿಯ ನಾಮಮಾನುಷ ಜನುಮ ಸಫಲ ಮಾಡುವುದೀಹರಿಯನಾಮ ||೪|| ವ್ಯಾಳ ವ್ಯಾಳಕೆ ಎಚ್ಚರಿಕೆಯ ಕೊಡುವುದುಹರಿಯನಾಮಜಾಳಿಗೆ ಹೊಣ್ಣು ತುಂಬಿಟ್ಟಂತೆ ಕಾಣಿರೊಹರಿಯ ನಾಮ ||೫|| ಕಾಲನ ದೂತರಿಗಳುಕಿಸದಿಪ್ಪದುಹರಿಯ ನಾಮಲೋಲ…

error: Content is protected !!