-
Yaake kakkulati paduve
Composer : Shri Purandara dasaru ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮಸಾಕಲಾರದೆ ಬಿಡುವನೆ ಮರುಳೆ ||ಅ|| ಕಲ್ಲು ಪಡೆಯಲ್ಲಿ ಹುಟ್ಟಿರುವ ಮಂಡೂಕಕೆಅಲ್ಲಿ ತಂದಿಡುವರ್ಯಾರೋಎಲ್ಲವನು ತೊರೆದಿರುವ ಅರಣ್ಯವಾಸಿಯನುಅಲ್ಲೆ ಸಲಹದೆ ಬಿಡುವನೆ ಮರುಳೆ |೧| ಅಡವಿಯೊಳು ಹುಟ್ಟುವ ಮೃಗ ಜಾತಿಗಳಿಗೆಲ್ಲಬಿಡದೆ ತಂದಿಡುವರ್ಯಾರೋಗಿಡದಿಂದ ಗಿಡಗಳಿಗೆ ಹಾರುವ ಹಕ್ಕಿಗೆಪಡಿಯನಳೆಯದೆ ಬಿಡುವನೇ ಮರುಳೆ |೨| ಎಂಭತ್ತು ನಾಲ್ಕು ಲಕ್ಷ ಜೀವ ರಾಶಿಗಳನ್ನುಹಿಂಬಾಗಿ ಸಲಹುತಿಹನುನಂಬು ಶ್ರೀಪುರಂದರವಿಠ್ಠಲನ ಚರಣವನುನಂಬಿದರೆ ಸಲಹದಿಹನೇ ಮರುಳೆ |೩| yAke kakulAti paDuve…
-
Nambadiru ee deha
Composer : Shri Purandara dasaru ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ [ಪ] ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆಮಲಮೂತ್ರ ಒಳಗೆ ಕ್ರಿಮಿ ರಾಶಿ ಇಹವುಹಲವು ವ್ಯಾಧಿಯ ಬೀಡು ಪಂಚಭೂತದನಾಡುಹುಲು ದೇಹವ ನೆಚ್ಚಿ ಕೆಡಬೇಡ ಮನವೆ [೧] ಸತಿ ಸುತರು ಹಿತವರೆಂದು ಮತಿ ಮರೆತು ಮಮತೆಯಲಿಅತಿಕಾಂಕ್ಷೆಯಿಂದ ದುರ್ವಿಷಯ ಬಲಿದುಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದಗತಿಶೂನ್ಯನಾಗಿ ನೀ ಕೆಡಬೇಡ ಮನವೆ [೨] ಪರರ ನಿಂದಿಸದೆ ಪರರ ಧನವನು ಬಯಸದೆಗುರುವಿಪ್ರ ಸೇವೆಯನು ಮಾಡು ಬಿಡದೆಹರಿ ಸ್ತುತಿಯ…
-
Muddu Taro Ranga
Composer : Shri Purandara dasaru ಮುದ್ದು ತಾರೋ ರಂಗ ಎದ್ದು ಬಾರೋ ||ಪ||ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ, ಅಸುರೆ ಪೂತನಿಯ ಕೊಂದೆವಶವಲ್ಲವೊ ಮಗನೆ ನಿನ್ನ, ವಿಷವನುಂಡ ಬಾಯೊಳೊಮ್ಮೆ |೧| ಕಡೆವ ಸಮಯದಿ ಬಂದು, ಕಡೆವ ಸತಿಯ ಕೈಯ ಪಿಡಿದುಕಡೆದ ಬೆಣ್ಣೆ ಮೊಸರನೆಲ್ಲ, ಒಡನೆ ಮೆದ್ದ ಬಾಯೊಳೊಮ್ಮೆ |೨| ತೊರವೆಯ ನಾರಸಿಂಹ, ವರದ ಪುರಂದರವಿಠಲಹರವಿಹಾಲನೆಲ್ಲ ಕುಡಿದ, ನೊರೆ ಹಾಲಿನ ಬಾಯೊಳೊಮ್ಮೆ |೩| muddu tArO raMga eddu bArO ||pa||aMdavAda karpUrada karaDigeya…
