Lakshmi

  • Nadedu baa ma

    Composer : Shri Prasannavenkata dasaru ನಡೆದು ಬಾಮ್ಮ ಲಕುಮೀ ನಿನಗೆನಡೆಮುಡಿಯ ಹಾಸುವೆ |ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ||ಅ.ಪ.|| ಮರುಗ,ಮಲ್ಲಿಗೆ,ಧವನ,ಸಂಪಿಗೆ ಸರಗಳನ್ನೇ ಪೂಜಿಪೆ |ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ ||೧|| ಹೀರೆ,ಕುಂಬಳ ಕಾಯಿ,ಪಡವಳ ಶಾಖ ಪಾಕವ ಮಾಡುವೆ |ಘನ್ನ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು ||೨|| ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ ಲಕ್ಷ್ಮೀ ನಿನಗೆ |ದಿಟ್ಟ ಪ್ರಸನ್ನ ವೆಂಕಟ ವಿಠಲನ ಪಟ್ಟದ ರಾಣಿಯೆ ||೩|| naDedu bAmma lakumI ninagenaDemuDiya hAsuve…

  • Anjisuvudyakamma

    Composer : Shri Vyasatatvajnaru – Vasudeva vittala ankita ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ |ಅಂಜಿಸಿದರೆ ಲೋಕ ಅಂಜದಿರುವುದೆ || ಪ || ಕುಂಜರಗಮನೆ ನಾವಂಜನದೇವಿ |ಸಂಜಾತನಾದ ಪ್ರಭಂಜನನಣುಗರು ||ಕಂಜನಾಭನ ಪಾದ ಕಂಜಕ್ಕೆ ವಿಮುಖ |ಸಂಜಿಲಿ ಚರಿಸುವ ಪುಂಜರು ಕಡಿಮೆ || ೧ || ನಿನ್ನಾನೆ ನಂಬಿ ನಾವಿನ್ನು ಸಂಸೃತಿಯಾ |ಬನ್ನಾವೆ ಕಳಕೊಂಡು ಚನ್ನಾಗಿ ಜಗದಿ ||ಧನ್ಯಾರಾದೇವೆಂದು ಮನ್ನಾದಿ ಬಯಸೆ |ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ || ೨ || ಸಿರಿ ನಾರಸಿಂಹನ್ನ ವರ ಭಕ್ತಿಯಲಿ…

  • Bhame nee tandu

    Composer : Shri Mahipati dasaru ಭಾಮೆ ನೀ ತಂದು ತೋರೆದೇವ ದೇವೆನಿಸುವ ಶ್ರೀ ಹರಿ ವಾಸುದೇವನ [ಪ] ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನರಮ್ಯದೋರುವ ಜಗನ್ ಮೋಹನನಘಮ್ಮನೆ ಹೊಳೆವ ಕಸ್ತುರಿ ತಿಳಕನಸುಮ್ಮನೆ ಸುಸ್ವರದಿ ಕೊಳಳನೂದುವನ [೧] ಹದ್ದೆ ಅಡುವನ ಮುದ್ದು ಮಾತಿನವನಗೆದ್ದು ಸಿದ್ದಿಯ ಮಣಿ ತಂದವನತಿದ್ದಿ ಕುಬಜೆಗೊಲಿದು ಶುದ್ಧ ಮಾಡಿದವನಉದ್ಧವಪ್ರಿಯ ಶ್ರೀ ಆದಿಕೇಶವನ [೨] ಸುಂದರ ವದನನ ಸಾಂದ್ರ ಸುಖದವನಕಂದರ್ಪಕೋಟಿ ಸುಲಾವಣ್ಯನಎಂದೆಂದು ಕರುಣನ ಇಂದಿರೆ ರಮಣನಬಂದು ಮಹಿಪತಿ ಮನೋಹರ ಮಾಡುವನ [೩] BAme nI taMdu tOredEva dEvenisuva…

error: Content is protected !!